May 5, 2026
Tuesday, May 5, 2026
spot_img

ಮೊದಲ ಹೆಜ್ಜೆಯಲ್ಲೇ ರಾಜಕೀಯ ‘ವಿಜಯ’: ದಳಪತಿಗೆ ಸಿನಿತಾರೆಯರ ಅಭಿನಂದನೆಗಳ ಸುರಿಮಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ರಾಜಕೀಯ ಚಿತ್ರಣವನ್ನೇ ಬದಲಿಸಿದ ಚುನಾವಣಾ ಫಲಿತಾಂಶದ ಬಳಿಕ ನಟ ದಳಪತಿ ವಿಜಯ್ ಈಗ ರಾಜಕೀಯದ ಕೇಂದ್ರಬಿಂದುವಾಗಿದ್ದಾರೆ. ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದ ಅವರ ತಮಿಳಗ ವೆಟ್ರಿ ಕಳಗಂ ಪಕ್ಷ ಭರ್ಜರಿ ಪ್ರದರ್ಶನ ನೀಡಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸರ್ಕಾರ ರಚನೆ ಚರ್ಚೆಗೆ ವೇದಿಕೆ ಸಿದ್ಧವಾಗಿದೆ.

234 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿವಿಕೆ 107 ಸ್ಥಾನಗಳನ್ನು ಗೆದ್ದು ಡಿಎಂಕೆ ಹಾಗೂ ಎಐಎಡಿಎಂಕೆ ಪ್ರಾಬಲ್ಯಕ್ಕೆ ದೊಡ್ಡ ಸವಾಲು ಎಸೆದಿದೆ. ಬಹುಮತಕ್ಕೆ ಇನ್ನೂ ಕೆಲ ಸ್ಥಾನಗಳ ಕೊರತೆ ಇದ್ದರೂ, ಏಕೈಕ ಅತಿದೊಡ್ಡ ಪಕ್ಷವಾಗಿ ಸರ್ಕಾರ ರಚನೆಗೆ ಅವಕಾಶಗಳು ಹೆಚ್ಚಾಗಿವೆ. ಹೊರಗಿನ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರುವ ಲೆಕ್ಕಾಚಾರವೂ ಜೋರಾಗಿದೆ.

ಇದನ್ನೂ ಓದಿ:

ವಿಜಯ್ ಅವರ ಈ ರಾಜಕೀಯ ಏರಿಗೆಯನ್ನು ಸಿನಿರಂಗದ ಅನೇಕ ಗಣ್ಯರು ಮೆಚ್ಚಿದ್ದಾರೆ. ಹಿರಿಯ ನಟ ರಜನಿಕಾಂತ್ ಸೇರಿದಂತೆ ಹಲವು ತಾರೆಯರು ಶುಭಾಶಯ ಕೋರಿದ್ದು, ಬಿಜೆಪಿ ನಾಯಕಿ ಖುಷ್ಬು ಸುಂದರ್ ಕೂಡ ವಿಜಯ್ ಅವರನ್ನು “ಜನನಾಯಕ” ಎಂದು ಕೊಂಡಾಡಿದ್ದಾರೆ.

ಧನುಷ್, ಚಿರಂಜೀವಿ, ಕಾಜಲ್ ಅಗರ್ವಾಲ್, ಮಹೇಶ್ ಬಾಬು ಸೇರಿದಂತೆ ಹಲವು ಸಿನಿತಾರೆಯರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಈಗ ಎಲ್ಲರ ಕಣ್ಣು ವಿಜಯ್ ಮುಂದಿನ ರಾಜಕೀಯ ಹೆಜ್ಜೆಯತ್ತ ನೆಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !