September 18, 2026
Friday, September 18, 2026
spot_img

Mint Buttermilk | ಬೇಸಿಗೆಯಲ್ಲಿ ದೇಹಕ್ಕೆ ತಂಪು ಕೊಡುವ ಪುದೀನಾ ಮಜ್ಜಿಗೆ: ಟ್ರೈ ಮಾಡಿ ಒಮ್ಮೆ

ಬೇಸಿಗೆಯ ಬಿಸಿಲಿನಲ್ಲಿ ದೇಹಕ್ಕೆ ತಂಪು, ಹೊಟ್ಟೆಗೆ ಆರಾಮ ಮತ್ತು ಕ್ಷಣಾರ್ಧದಲ್ಲಿ ಚೈತನ್ಯ ನೀಡುವ ಪಾನೀಯ ಅಂದ್ರೆ ಪುದೀನಾ ಮಜ್ಜಿಗೆ. ಪುದೀನಾದ ಸುವಾಸನೆ, ಮೊಸರಿನ ತಂಪು ಮತ್ತು ಜೀರಿಗೆಯ ಸವಿ ಸೇರಿ ಈ ಪಾನೀಯವನ್ನು ಇನ್ನಷ್ಟು ರುಚಿಕರವಾಗಿಸುತ್ತದೆ.

ಬೇಕಾಗುವ ಪದಾರ್ಥಗಳು:

ದಪ್ಪ ಮೊಸರು – 1 ಕಪ್
ತಣ್ಣೀರು – 1 ರಿಂದ 2 ಕಪ್
ತಾಜಾ ಪುದಿನಾ ಎಲೆಗಳು – ಒಂದು ಹಿಡಿ
ಶುಂಠಿ – ½ ಇಂಚು ತುಂಡು
ಹಸಿಮೆಣಸಿನಕಾಯಿ – 1 (ಬೇಕಿದ್ದರೆ)
ಹುರಿದ ಜೀರಿಗೆ ಪುಡಿ – ½ ಚಮಚ
ಕಪ್ಪು ಉಪ್ಪು ಅಥವಾ ಸಾಮಾನ್ಯ ಉಪ್ಪು – ರುಚಿಗೆ ತಕ್ಕಷ್ಟು
ಐಸ್ ಕ್ಯೂಬ್ಸ್ – 3 ರಿಂದ 4
ಅಲಂಕಾರಕ್ಕೆ ಸ್ವಲ್ಪ ಪುದಿನಾ ಎಲೆಗಳು

ಮಾಡುವ ವಿಧಾನ:

ಮೊದಲು ಮಿಕ್ಸಿ ಜಾರ್‌ಗೆ ಪುದಿನಾ ಎಲೆಗಳು, ಶುಂಠಿ, ಹಸಿಮೆಣಸಿನಕಾಯಿ ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಅದಕ್ಕೆ ಮೊಸರು, ಜೀರಿಗೆ ಪುಡಿ, ಉಪ್ಪು ಹಾಗೂ ತಣ್ಣೀರು ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ. ನೊರೆ ಬರುವಷ್ಟು ಚೆನ್ನಾಗಿ ಮಿಶ್ರಣವಾದ ಬಳಿಕ ಗ್ಲಾಸ್‌ಗೆ ಸುರಿದು ಐಸ್ ಕ್ಯೂಬ್ಸ್ ಹಾಕಿ. ಮೇಲೆ ಪುದಿನಾ ಎಲೆಗಳಿಂದ ಅಲಂಕರಿಸಿ ತಣ್ಣಗೆ ಸವಿಯಿರಿ.

ಟಿಪ್:

ಸ್ವಲ್ಪ ನಿಂಬೆರಸ ಸೇರಿಸಿದರೆ ರುಚಿ ಇನ್ನಷ್ಟು ಫ್ರೆಶ್ ಆಗಿರುತ್ತದೆ. ಊಟದ ನಂತರ ಕುಡಿದರೆ ಜೀರ್ಣಕ್ರಿಯೆಗೂ ತುಂಬಾ ಒಳ್ಳೆಯದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !