ಕೋಲ್ಡ್ ಸ್ಯಾಂಡ್‌ವಿಚ್‌ಗಳು ಬೇಸಿಗೆಯಲ್ಲಿ, ಪಿಕ್ನಿಕ್‌ಗೆ ಅಥವಾ ಮಕ್ಕಳಿಗೆ ತ್ವರಿತವಾಗಿ ಮಾಡಬಹುದಾದ ಆರೋಗ್ಯಕರ ಮತ್ತು ರುಚಿಕರ ತಿಂಡಿಯಾಗಿದೆ. ಇದನ್ನು ಬೇಯಿಸುವ ಅಗತ್ಯವಿಲ್ಲ, ಫ್ರಿಜ್‌ನಿಂದ ನೇರವಾಗಿ ತಣ್ಣಗೆ ಸವಿಯಬಹುದು.
ಬೇಕಾಗುವ ಪದಾರ್ಥಗಳು:
ಬ್ರೆಡ್ ಸ್ಲೈಸ್ (ವೈಟ್ ಅಥವಾ ಬ್ರೌನ್) – 4
ಮೇಯೋ – 3 ರಿಂದ 4 ಚಮಚ
ತಾಜಾ ಕ್ರೀಮ್ – 1 ರಿಂದ 2 ಚಮಚ
ತುರಿದ ಕ್ಯಾರೆಟ್ – 2 ಚಮಚ
ಸಣ್ಣದಾಗಿ ಹೆಚ್ಚಿದ ಕೋಸು – 2 ಚಮಚ
ಸಣ್ಣದಾಗಿ ಹೆಚ್ಚಿದ ಕ್ಯಾಪ್ಸಿಕಂ – 1 ಚಮಚ
ಕಪ್ಪು ಮೆಣಸಿನ ಪುಡಿ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
ಮೊದಲು ಒಂದು ಬೌಲ್‌ನಲ್ಲಿ ಮೇಯೋ, ತಾಜಾ ಕ್ರೀಮ್, ತುರಿದ ಕ್ಯಾರೆಟ್, ಕೋಸು ಮತ್ತು ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದಕ್ಕೆ ಉಪ್ಪು ಮತ್ತು ಕಪ್ಪು ಮೆಣಸಿನ ಪುಡಿ ಸೇರಿಸಿ ಮತ್ತೊಮ್ಮೆ ಮಿಶ್ರಣ ಮಾಡಿ.
ಬ್ರೆಡ್ ಸ್ಲೈಸ್‌ಗಳ ಅಂಚುಗಳನ್ನು ಕತ್ತರಿಸಿ ತೆಗೆದು ಒಂದು ಸ್ಲೈಸ್ ಮೇಲೆ ಸಿದ್ಧ ಮಾಡಿದ ಮಿಶ್ರಣವನ್ನು ದಪ್ಪವಾಗಿ ಹಚ್ಚಿ. ಮತ್ತೊಂದು ಬ್ರೆಡ್ ಸ್ಲೈಸ್‌ನಿಂದ ಮುಚ್ಚಿ.
ಈ ಸ್ಯಾಂಡ್‌ವಿಚ್‌ಗಳನ್ನು ತ್ರಿಕೋನ ಆಕಾರದಲ್ಲಿ ಕತ್ತರಿಸಿ ಕನಿಷ್ಠ 30 ನಿಮಿಷ ಫ್ರಿಜ್‌ನಲ್ಲಿ ಇಡಿ. ತಣ್ಣಗಾದ ನಂತರ ಸಲಾಡ್ ಅಥವಾ ಸಾಸ್ ಜೊತೆ ಸವಿಯಿರಿ.
ಟಿಪ್:
ಮೇಯೋ ಬದಲಿಗೆ ಗಟ್ಟಿಯಾದ ಮೊಸರು (hung curd) ಬಳಸಿದರೆ ಇದು ಇನ್ನೂ ಆರೋಗ್ಯಕರವಾಗುತ್ತದೆ.



