November 5, 2026
Thursday, November 5, 2026
spot_img

ಫಿಟ್ & ಫುಡ್ 05 | ಮನೆಯಲ್ಲಿ ಪನೀರ್ ಇದ್ದರೆ ಸಾಕು, ಕೆಲವೇ ನಿಮಿಷದಲ್ಲಿ ಈ ಹೈ-ಪ್ರೊಟೀನ್ ಬ್ರೇಕ್‌ಫಾಸ್ಟ್ ರೆಡಿ

ಆಫೀಸ್‌ಗೆ ಹೋಗೋ ಗಡಿಬಿಡಿಯಲ್ಲಿ ಸರಿಯಾಗಿ ಬ್ರೇಕ್‌ಫಾಸ್ಟ್ ಮಾಡೋಕೆ ಎಷ್ಟೋ ಸಾರಿ ಟೈಮೇ ಸಿಗಲ್ಲ. ಆದರೆ ಹೆಲ್ತ್ ಹಾಳು ಮಾಡ್ಕೋಬಾರದು ಅಲ್ವಾ? ಅದಕ್ಕೆ ಬೆಸ್ಟ್ ಆಪ್ಷನ್ ಅಂದ್ರೆ ಈ ಪನೀರ್ ಟೋಸ್ಟ್. ತರಕಾರಿ ಕತ್ತರಿಸೋ ರಗಳೆ ಇಲ್ಲ, ಹಿಟ್ಟು ಹುದುಗಿಸೋ ಚಿಂತೆ ಇಲ್ಲ. ಕೇವಲ ಎರಡು ಬ್ರೆಡ್ ಸ್ಲೈಸ್ ಮತ್ತು ಸ್ವಲ್ಪ ಪನೀರ್ ಇದ್ರೆ ಸಾಕು, ಹೊಟ್ಟೆ ತುಂಬುವಂತಹ ಹೈ-ಪ್ರೊಟೀನ್ ತಿಂಡಿ ರೆಡಿ ಆಗುತ್ತೆ.

ಬೇಕಾಗುವ ಸಾಮಗ್ರಿಗಳು

ಪನೀರ್

ಬ್ರೆಡ್ ಸ್ಲೈಸ್

ಈರುಳ್ಳಿ

ಟೊಮೆಟೊ

ಹಸಿಮೆಣಸಿನಕಾಯಿ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಮಸಾಲೆ ಪುಡಿಗಳು

ಕೊತ್ತಂಬರಿ ಸೊಪ್ಪು

ಬೆಣ್ಣೆ ಅಥವಾ ಎಣ್ಣೆ

ಉಪ್ಪು

ಮಾಡುವ ವಿಧಾನ

ಮೊದಲು ಒಂದು ಪ್ಯಾನ್‌ಗೆ 1 ಚಮಚ ಎಣ್ಣೆ ಅಥವಾ ಬೆಣ್ಣೆ ಹಾಕಿ ಕಾಯಿಸಿ, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದು, ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ 1 ನಿಮಿಷ ಬಾಡಿಸಬೇಕು. ಈಗ ಹೆಚ್ಚಿದ ಟೊಮೆಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ. ಮಸಾಲಾ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕೈಯಾಡಿಸಬೇಕು.

ಮಸಾಲೆ ಬೆಂದ ನಂತರ ಪುಡಿ ಮಾಡಿದ ಪನೀರ್ ಸೇರಿಸಿ, ಕಡಿಮೆ ಉರಿಯಲ್ಲಿ 2-3 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿದರೆ ಪನೀರ್ ಭುರ್ಜಿ ಸಿದ್ಧವಾಗುತ್ತದೆ.

ನಂತರ ಬ್ರೆಡ್ ಸ್ಲೈಸ್‌ಗಳ ಒಂದು ಬದಿಗೆ ಸ್ವಲ್ಪ ಬೆಣ್ಣೆ ಅಥವಾ ಹಸಿರು ಚಟ್ನಿಯನ್ನು ಸವರಿ, ಬೆಣ್ಣೆ ಸವರಿದ ಬ್ರೆಡ್ ಮೇಲ್ಭಾಗದಲ್ಲಿ ಸಿದ್ಧಪಡಿಸಿದ ಪನೀರ್ ಭುರ್ಜಿಯನ್ನು ಹರಡಬೇಕು. ನಂತರ ತವಾವನ್ನು ಕಾಯಿಸಿ, ಸ್ವಲ್ಪ ಬೆಣ್ಣೆ ಹಾಕಿ, ಪನೀರ್ ಇಟ್ಟ ಬ್ರೆಡ್ ಅನ್ನು ಅದರ ಮೇಲಿಟ್ಟು ಕಡಿಮೆ ಉರಿಯಲ್ಲಿ ಬ್ರೆಡ್ ಕೆಳಭಾಗ ಗರಿಗರಿಯಾಗುವವರೆಗೆ ಟೋಸ್ಟ್ ಮಾಡಿದರೆ ಪನೀರ್ ಭುರ್ಜಿ ಟೋಸ್ಟ್ ರೆಡಿ.

Must Read