ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರದ ರಾಜಕುಮಾರ ಲೇಔಟ್‌ನಲ್ಲಿ ನಾಯಿಯೊಂದು ಮೂವರು ವರ್ಷದ ಬಾಲಕನ ಮೇಲೆ ಅಟ್ಯಾಕ್ ಮಾಡಿದೆ.
ಮೂರು ವರ್ಷದ ಬಾಲಕ ವಿರಾಜ್ ಸಂತೋಷ್ ಬಿರಾದಾರ್ ಮನೆಯ ಮುಂದೆ ಆಟ ಆಡುತ್ತಾ ನಿಂತಿದ್ದ ವೇಳೆ ಬೀದಿನಾಯಿಯೊಂದು ಅಟ್ಯಾಕ್ ಮಾಡಿದೆ. ನಂತರ ಬಾಯಲ್ಲಿ ಮಗುವನ್ನು ಕಚ್ಚಿಕೊಂಡು ನೂರು ಅಡಿ ದೂರ ಕರೆದುಕೊಂಡು ಹೋಗಿದೆ.
ನೆರೆಹೊರೆಯವರು ಕೂಗಾಡಿ ಮಧ್ಯಕ್ಕೆ ಬಂದಿದ್ದು ನಾಯಿ ಮಗುವನ್ನು ಬಿಟ್ಟು ಓಡಿಹೋಗಿದೆ. ಮಗುವಿನ ತೊಡೆಯ ಭಾಗಕ್ಕೆ ನಾಯಿ ಕಚ್ಚಿದ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗು ಸಾವಿನ ದವಡೆಯಿಂದ ಪಾರಾಗಿದೆ. ಆದರೆ ಸ್ಥಿತಿ ಗಂಭೀರವಾಗಿದೆ ಎಂದು ಪೋಷಕರು ಹೇಳಿದ್ದಾರೆ. ಮಕ್ಕಳು ಮನೆಯ ಮುಂದೆ ಆಟ ಆಡ್ತಿದ್ದಾರೆ ಎಂದು ಸುಮ್ಮನಾಗಬೇಡಿ ಪೋಷಕರೇ, ಪ್ರತಿ ನಿಮಿಷವೂ ಅವರ ಮೇಲೆ ಗಮನ ಇರಲಿ.



