July 17, 2026
Friday, July 17, 2026
spot_img

ರಸ್ತೆ ಮಧ್ಯೆ ಅಗ್ನಿಗೋಳವಾದ ಪೆಟ್ರೋಲ್ ಟ್ಯಾಂಕರ್: ಹಾಲಿನ ಲಾರಿ ಭಸ್ಮ, ಚಾಲಕರ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸಮೀಪ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭಾರೀ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿಯ ತೀವ್ರತೆಗೆ ಸಮೀಪದಲ್ಲಿದ್ದ ಮತ್ತೊಂದು ಹಾಲಿನ ಲಾರಿಗೂ ಬೆಂಕಿ ವ್ಯಾಪಿಸಿ ಎರಡೂ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಟ್ಯಾಂಕರ್

ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ 11ನೇ ಮೈಲಿ ಬಳಿ ಈ ಅವಘಡ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಪೆಟ್ರೋಲ್ ಟ್ಯಾಂಕರ್‌ಗೆ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಜ್ವಾಲೆಗಳು ವ್ಯಾಪಿಸಿವೆ.

ಇದನ್ನೂ ಓದಿ:

ಹಾಲಿನ ಲಾರಿಗೂ ಬೆಂಕಿ ವ್ಯಾಪ್ತಿ

ಅದೇ ವೇಳೆ ಸಮೀಪದಲ್ಲಿ ರಿವರ್ಸ್ ಮಾಡುತ್ತಿದ್ದ ಹಾಲಿನ ಲಾರಿಗೆ ಬೆಂಕಿ ತಗುಲಿದ್ದು, ಎರಡೂ ವಾಹನಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.

ಚಾಲಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಬೆಂಕಿ ಕಾಣಿಸಿಕೊಂಡ ತಕ್ಷಣವೇ ಎರಡೂ ವಾಹನಗಳ ಚಾಲಕರು ಸುರಕ್ಷಿತವಾಗಿ ಹೊರಬಂದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಸಾವು-ನೋವು ವರದಿಯಾಗಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !