October 10, 2026
Saturday, October 10, 2026
spot_img

‘ಸೆರಗು ಸರಿಸಿದ್ದಕ್ಕೆ ಕ್ಷಮಿಸಿಬಿಡಿ’ ಎಂದ ನೋರಾ: ಜೊತೆಗೊಂದು ಪ್ರಾಯಶ್ಚಿತ್ತ ನಿರ್ಧಾರವಿದ್ಯಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಕೆಡಿ’ ಚಿತ್ರದ ಹಾಡಿನ ಸುತ್ತ ಎದ್ದಿದ್ದ ವಿವಾದ ಇದೀಗ ಕೊನೆ ಹಂತ ತಲುಪಿದೆ. ಆಕ್ಷೇಪಾರ್ಹ ಅಂಶಗಳ ಆರೋಪದ ನಡುವೆ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾದ ನಟಿ ನೋರಾ ಫತೇಹಿ, ಲಿಖಿತ ರೂಪದಲ್ಲಿ ಕ್ಷಮೆಯಾಚಿಸಿ ಸಮಾಜಮುಖಿ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ.

ಆಯೋಗದ ವಿಚಾರಣೆಗೆ ಹಾಜರಾದ ಬಳಿಕ ಮಾತನಾಡಿದ ಅವರು, ಯಾರ ಭಾವನೆಗೂ ಧಕ್ಕೆ ಉಂಟುಮಾಡುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಕಲಾವಿದೆಯಾಗಿ ಸಾಮಾಜಿಕ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು ಎಂಬ ನಿಲುವಿನಿಂದಲೇ ಕ್ಷಮೆ ಕೇಳಿದ್ದೇನೆ ಎಂದು ತಿಳಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಆಯೋಗದಿಂದ ಉತ್ತಮ ಸಹಕಾರವೂ ದೊರಕಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ವಿವಾದಕ್ಕೆ ಪ್ರಾಯಶ್ಚಿತ್ತವಾಗಿ ಕೆಲವು ಅನಾಥ ಹೆಣ್ಣು ಮಕ್ಕಳ ಶಿಕ್ಷಣ ವೆಚ್ಚವನ್ನು ಭರಿಸುವುದಾಗಿ ನೋರಾ ಘೋಷಿಸಿದ್ದಾರೆ. ಸಮಾಜಕ್ಕೆ ಮರಳಿ ಕೊಡುವ ಉದ್ದೇಶದಿಂದ ಈ ಹೆಜ್ಜೆ ಇಟ್ಟಿದ್ದಾಗಿ ವಿವರಿಸಿದ್ದಾರೆ. ಇದೇ ಪ್ರಕರಣದಲ್ಲಿ ನಟ ಸಂಜಯ್ ದತ್ ಕೂಡ ಕ್ಷಮೆ ಕೇಳಿ, 50 ಬುಡಕಟ್ಟು ಬಾಲಕಿಯರ ಶಿಕ್ಷಣದ ಹೊಣೆ ಹೊರುವ ಭರವಸೆ ನೀಡಿದ್ದರು.

ಮಾರ್ಚ್‌ನಲ್ಲಿ ಬಿಡುಗಡೆಯಾದ ಈ ಹಾಡು ಸಾಹಿತ್ಯ ಹಾಗೂ ದೃಶ್ಯ ವಿನ್ಯಾಸದ ಕಾರಣ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ನಂತರ ಹಾಡನ್ನು ಡಿಜಿಟಲ್ ವೇದಿಕೆಗಳಿಂದ ತೆಗೆದುಹಾಕಲಾಗಿದ್ದು, ಇದೀಗ ಬಿಡುಗಡೆಯಾದ ‘ಕೆಡಿ’ ಚಿತ್ರದಲ್ಲಿ ಆ ಹಾಡನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ.

Must Read