October 10, 2026
Saturday, October 10, 2026
spot_img

ಭಾರತ ಪ್ರವಾಸದಲ್ಲಿರುವ ವಿಯೆಟ್ನಾಂ ಅಧ್ಯಕ್ಷ ಮುಂಬೈಗೆ ಭೇಟಿ: ಪ್ರತಿಷ್ಠಿತ ‘ರಿಂಗ್ ದಿ ಬೆಲ್’ ಕಾರ್ಯಕ್ರಮದಲ್ಲಿ ಭಾಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ವಿಯೆಟ್ನಾಂ ಅಧ್ಯಕ್ಷ ತೋ ಲಾಮ್ ಇಂದು ಮುಂಬೈಗೆ ಭೇಟಿ ನೀಡಿದ್ದು, ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ – NSEಯಲ್ಲಿ ಪ್ರತಿಷ್ಠಿತ ‘ ರಿಂಗ್ ದಿ ಬೆಲ್ ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತೋ ಲಾಮ್ ಅವರನ್ನು NSE ವ್ಯವಸ್ಥಾಪಕ ನಿರ್ದೇಶಕ ಆಶಿಶ್ ಕುಮಾರ್ ಚೌಹಾಣ್ ಮತ್ತಿತರ ಉದ್ಯಮ ಗಣ್ಯರು ಸ್ವಾಗತಿಸಿದರು.
ಇದೇ ವೇಳೆ ಭಾರತದ ಷೇರು ಮಾರುಕಟ್ಟೆಯ ಸಾಮರ್ಥ್ಯದ ಬಗ್ಗೆ ತೋ ಲಾಮ್ ಅವರು ಶ್ಲಾಘಿಸಿದರು. ಇಂದು ಮಧ್ಯಾಹ್ನ ತೋ ಲಾಮ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂಧ್ರ ಫಡ್ನವೀಸ್ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದು, ಭಾರತ – ವಿಯೆಟ್ನಾಂ ವಾಣಿಜ್ಯ ವೇದಿಕೆ ಸಭೆಯಲ್ಲಿ ಭಾಗವಹಿಸಿ ಪ್ರಧಾನ ಭಾಷಣ ಮಾಡಲಿದ್ದಾರೆ. ಈ ಸಭೆಯನ್ನು ಭಾರತೀಯ ಕೈಗಾರಿಕಾ ಮಹಾ ಒಕ್ಕೂಟ, ವಿಯೆಟ್ನಾಂ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಸಹಭಾಗಿತ್ವದಲ್ಲಿ ಆಯೋಜಿಸಿದೆ.

ಸಭೆಯಲ್ಲಿ ದ್ವಿಪಕ್ಷೀಯ ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಯಲಿದೆ. ಬಳಿಕ ವಿಯೆಟ್ನಾಂ ಅಧ್ಯಕ್ಷರು ಮಹಾರಾಷ್ಟ್ರದ ಲೋಕಭವನಕ್ಕೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸಲಿದ್ದಾರೆ.

Must Read