June 26, 2026
Friday, June 26, 2026
spot_img

ಬಂದ್..ಬಂದ್.. IPLನಲ್ಲಿ ಎಲ್ಲಾ ಬಂದ್..! ವ್ಲಾಗ್ ಮಾಡೋಹಾಗಿಲ್ಲ, ಡ್ರೆಸಿಂಗ್ ರೂಮ್ ಗೆ ನೋ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ನಲ್ಲಿ ತಂಡಗಳ ಒಳಾಂಗಣ ಚಟುವಟಿಕೆಗಳು ಹೊರಗೆ ಸೋರಿಕೆಯಾಗುತ್ತಿರುವ ಆತಂಕದ ನಡುವೆ ಬಿಸಿಸಿಐ ಈಗ ಕಠಿಣ ನಿಯಮ ಜಾರಿಗೆ ಮುಂದಾಗಿದೆ.

ಡ್ರೆಸಿಂಗ್ ರೂಮ್, ತಂಡದ ಬಸ್ ಮತ್ತು ಆಟಗಾರರ ಖಾಸಗಿ ವಲಯಗಳಲ್ಲಿ ಅನಧಿಕೃತ ಪ್ರವೇಶಕ್ಕೆ ಕಡಿವಾಣ ಹಾಕುವ ಜೊತೆಗೆ, ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದ ಚಿತ್ರೀಕರಣಗಳ ಮೇಲೂ ನಿಯಂತ್ರಣ ಹೇರಲಾಗಿದೆ.

ತಂಡದ ರಹಸ್ಯ ಮಾಹಿತಿ, ಆಟಗಾರರ ಮಾತುಕತೆ ಹಾಗೂ ಒಳಗಿನ ವಾತಾವರಣ ಹೊರಗೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಎಲ್ಲಾ ಫ್ರಾಂಚೈಸಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಇದರಿಂದ ಕೆಲ ತಂಡಗಳು ತಕ್ಷಣವೇ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದು, ಆಟಗಾರರ ವ್ಲಾಗ್ ಚಿತ್ರೀಕರಣಕ್ಕೂ ತಡೆ ವಿಧಿಸಿವೆ.

ಇದನ್ನೂ ಓದಿ:

ಇತ್ತೀಚಿನ ವಿಡಿಯೊ ವಿವಾದದ ಬಳಿಕ ಕೆಲ ಆಟಗಾರರ ಚಟುವಟಿಕೆಗಳ ಮೇಲೆ ಫ್ರಾಂಚೈಸಿಗಳು ನಿಗಾ ಹೆಚ್ಚಿಸಿವೆ. ಪ್ರಯಾಣದ ವೇಳೆ, ಹೋಟೆಲ್‌ನಲ್ಲಿ ಅಥವಾ ತಂಡದೊಳಗಿನ ಕ್ಷಣಗಳನ್ನು ವಿಡಿಯೋ ಮಾಡಿ ಹಂಚಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ ಎನ್ನಲಾಗಿದೆ.

ಇದರ ಜೊತೆಗೆ ಆಟಗಾರರ ಹೋಟೆಲ್ ಕೊಠಡಿಗಳಿಗೆ ಅಪರಿಚಿತರ ಪ್ರವೇಶವನ್ನೂ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಫ್ರಾಂಚೈಸಿ ಮಾಲೀಕರು ಹಾಗೂ ಪ್ರತಿನಿಧಿಗಳಿಗೂ ಡಗೌಟ್, ಡ್ರೆಸಿಂಗ್ ರೂಮ್ ಅಥವಾ ಮೈದಾನದಲ್ಲಿ ಆಟಗಾರರೊಂದಿಗೆ ಅನಗತ್ಯ ಸಂಪರ್ಕ ಬೇಡ ಎಂದು ಎಚ್ಚರಿಕೆ ನೀಡಲಾಗಿದೆ. ನಿಯಮ ಉಲ್ಲಂಘನೆ ಕಂಡುಬಂದರೆ ಕಠಿಣ ಕ್ರಮ ಅನಿವಾರ್ಯ ಎಂಬ ಸಂದೇಶವನ್ನು ಬಿಸಿಸಿಐ ರವಾನಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !