ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾ ಚಿತ್ರಮಂದಿರದಲ್ಲಿ ಭರ್ಜರಿ ಯಶಸ್ಸು ಕಂಡ ಬಳಿಕ ಇದೀಗ ಡಿಜಿಟಲ್ ವೇದಿಕೆಯಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದ ಈ ಸಿನಿಮಾ ಇದೀಗ ಮನೆಮಾತಾಗುವ ನಿರೀಕ್ಷೆ ಮೂಡಿಸಿದೆ.
ಮೇ 15ರಿಂದ ಈ ಸಿನಿಮಾ ಭಾರತದಲ್ಲಿ ಜಿಯೋ ಹಾಟ್ ಸ್ಟಾರ್ ಹಾಗೂ ವಿದೇಶಗಳಲ್ಲಿ ನೆಟ್ ಫ್ಲಿಕ್ಸ್ ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ. ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಹೆಚ್ಚಿನ ಪ್ರೇಕ್ಷಕರನ್ನು ತಲುಪುವ ಸಾಧ್ಯತೆ ಇದೆ.
ಇದನ್ನೂ ಓದಿ:
ಚಿತ್ರಮಂದಿರದಲ್ಲಿ ಕಾಣದ ಕೆಲವು ಹೊಸ ದೃಶ್ಯಗಳನ್ನು ಡಿಜಿಟಲ್ ಆವೃತ್ತಿಯಲ್ಲಿ ಸೇರಿಸಲಾಗಿದೆ ಎನ್ನಲಾಗಿದೆ. ಹೆಚ್ಚುವರಿ ದೃಶ್ಯಗಳಿಂದ ಕಥೆಗೆ ಮತ್ತಷ್ಟು ರೋಚಕತೆ ಸಿಗಲಿದ್ದು, ಈಗಾಗಲೇ ಸಿನಿಮಾ ನೋಡಿದವರಿಗೂ ಹೊಸ ಅನುಭವ ನೀಡಲಿದೆ.
ದೇಶಭಕ್ತಿ, ಸಾಹಸ ಮತ್ತು ಗೂಢಚರ್ಯದ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಆದಿತ್ಯ ಧರ್ ನಿರ್ದೇಶಿಸಿದ್ದಾರೆ. ಅಕ್ಷಯ್ ಖನ್ನಾ, ಆರ್ ಮಾಧವನ್, ಅರ್ಜುನ್ ರಾಮ್ಪಾಲ್, ಸಂಜಯ್ ದತ್ ಅಭಿನಯ ಚಿತ್ರದ ಬಲವಾಗಿದೆ. ಡಿಜಿಟಲ್ ಬಿಡುಗಡೆಯೊಂದಿಗೆ ಸಿನಿಮಾ ಮತ್ತೊಮ್ಮೆ ಸುದ್ದಿಯಾಗುವ ಸಾಧ್ಯತೆ ಹೆಚ್ಚಾಗಿದೆ.



