May 9, 2026
Saturday, May 9, 2026
spot_img

WOMEN | ಮದುವೆಯ ನಂತರ ಮಹಿಳೆಯರು ಕೆಲಸಕ್ಕೆ ಹೋದ್ರೆ ಒಳ್ಳೆಯದಾ ಅಥವಾ ಮನೆಯಲ್ಲಿದ್ರೆ?

ಮದುವೆಯ ನಂತರ ಮಹಿಳೆಯರು ತಮ್ಮ ವೃತ್ತಿಜೀವನವನ್ನು ಮುಂದುವರಿಸುವುದು ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅತ್ಯಂತ ಅವಶ್ಯಕವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಮತ್ತು ಸಮಾನತೆ ಎಂಬುದು ಕೇವಲ ಮಾತಿಗೆ ಸೀಮಿತವಾಗಿಲ್ಲ. ಮಹಿಳೆಯರು ಮದುವೆಯ ನಂತರವೂ ಉದ್ಯೋಗ ಮಾಡುವುದು ಅವರ ವೈಯಕ್ತಿಕ ಬೆಳವಣಿಗೆಗೆ ಮಾತ್ರವಲ್ಲದೆ, ಒಂದು ಸದೃಢ ಕುಟುಂಬ ಮತ್ತು ಸಮಾಜದ ನಿರ್ಮಾಣಕ್ಕೂ ಅಡಿಪಾಯವಾಗಿದೆ. ಆರ್ಥಿಕ ಸ್ವಾವಲಂಬನೆ, ತನ್ನ ಕನಸುಗಳನ್ನು ನನಸು ಮಾಡಿಕೊಳ್ಳುವ ಹಂಬಲ ಮತ್ತು ಕುಟುಂಬಕ್ಕೆ ಆಸರೆಯಾಗುವ ಜವಾಬ್ದಾರಿ ಈ ಎಲ್ಲ ಅಂಶಗಳು ಮಹಿಳೆಯರನ್ನು ವೃತ್ತಿಜೀವನದಲ್ಲಿ ಸಕ್ರಿಯವಾಗಿರುವಂತೆ ಮಾಡುತ್ತದೆ.

ಮಹಿಳೆಯರು ಉದ್ಯೋಗ ಮಾಡುವುದು ಏಕೆ ಮುಖ್ಯ?

ಯಾರ ಮುಂದೆಯೂ ಕೈಚಾಚದೆ ತನ್ನ ಅಗತ್ಯಗಳನ್ನು ತಾನೇ ಪೂರೈಸಿಕೊಳ್ಳಬೇಕೆಂದರೆ ಮೊದಲು ಆರ್ಥಕವಾಗಿ ಸದೃಢವಾಗಿರಬೇಕು. ಇದು ಮಹಿಳೆಯಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಇಂದಿನ ದಿನಗಳಲ್ಲಿ ಖರ್ಚು, ವೆಚ್ಚಗಳು ಹೆಚ್ಚಾಗಿದೆ. ಗಂಡ-ಹೆಂಡತಿ ಇಬ್ಬರೂ ಸಂಪಾದಿಸಿದರೆ ಮಾತ್ರ ಕುಟುಂಬಕ್ಕೆ ಆರ್ಥಿಕ ಭದ್ರತೆ ಸಿಗುತ್ತದೆ ಮತ್ತು ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಸಾಧ್ಯವಾಗುತ್ತದೆ.

ಮದುವೆಯಾದ ಮೇಲೆ ಕೇವಲ ಹೆಂಡತಿ ಅಥವಾ ಸೊಸೆ ಎಂಬ ಪಾತ್ರಕ್ಕೆ ಸೀಮಿತವಾಗದೆ, ಸಮಾಜದಲ್ಲಿ ತನಗೂ ಒಂದು ಪ್ರತ್ಯೇಕ ಗುರುತು ಇರಲಿ ಎಂಬ ಹಂಬಲ ಎಲ್ಲರಲ್ಲೂ ಇರುತ್ತದೆ. ಹಾಗಾಗಿ ಕೆಲಸ ಮಾಡುವುದು ಮುಖ್ಯವಾಗಿದೆ.

ವರ್ಷಗಟ್ಟಲೆ ಕಷ್ಟಪಟ್ಟು ಓದಿದ ಶಿಕ್ಷಣ ಮತ್ತು ಗಳಿಸಿದ ಕೌಶಲ್ಯಗಳು ಮನೆಯಲ್ಲಿ ಸುಮ್ಮನೆ ಕುಳಿತರೆ ವ್ಯರ್ಥವಾಗುತ್ತವೆ. ಕೆಲಸ ಮಾಡುವುದರಿಂದ ಬುದ್ಧಿಶಕ್ತಿ ಮತ್ತು ಕ್ರಿಯಾಶೀಲತೆ ಹೆಚ್ಚಾಗುತ್ತದೆ.

ಜೀವನದಲ್ಲಿ ಯಾವಾಗ ಏನಾಗುತ್ತದೆ ಎಂದು ಹೇಳಲಾಗದು. ಅನಿರೀಕ್ಷಿತ ಸಂಕಷ್ಟಗಳು ಬಂದಾಗ ಮಹಿಳೆಯ ಹತ್ತಿರ ಕೆಲಸ ಮತ್ತು ಆದಾಯವಿದ್ದರೆ ಇಡೀ ಕುಟುಂಬವನ್ನು ಸಂಭಾಳಿಸಲು ಸಹಾಯವಾಗುತ್ತದೆ.

ಮನೆಯ ನಾಲ್ಕು ಗೋಡೆಗಳ ನಡುವೆ ಇರುವುದಕ್ಕಿಂತ ಹೊರಗಿನ ಪ್ರಪಂಚದ ಜೊತೆ ಬೆರೆತಾಗ ಹೊಸ ವಿಷಯಗಳು ತಿಳಿಯುತ್ತವೆ, ಇದು ಮಹಿಳೆಯರಿಗೆ ಮಾನಸಿಕವಾಗಿ ಸದೃಢರಾಗಿರಲು ಸಹಾಯ ಮಾಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !