May 9, 2026
Saturday, May 9, 2026
spot_img

Honey Cold Coffee | ಇನ್ಸ್ಟಾ ವೈರಲ್ ಹನಿ ಕೋಲ್ಡ್ ಕಾಫಿ: ಒಮ್ಮೆ ಟ್ರೈ ಮಾಡದಿದ್ರೆ ಹೇಗೆ?

ಬೇಸಿಗೆಯಲ್ಲಿ ತಂಪಾಗಿ, ರುಚಿಯಾಗಿ ಮತ್ತು ಮನೆಯಲ್ಲೇ ಕ್ಷಣಾರ್ಧದಲ್ಲಿ ತಯಾರಿಸಬಹುದಾದ ಪಾನೀಯಗಳಲ್ಲಿ ಹನಿ ಕೋಲ್ಡ್ ಕಾಫಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೆಂಡ್ ಆಗಿದೆ. ಜೇನುತುಪ್ಪದ ನೈಸರ್ಗಿಕ ಸಿಹಿ, ಕಾಫಿಯ ಸುವಾಸನೆ ಕಾಫಿಗೆ ವಿಭಿನ್ನ ರುಚಿ ನೀಡುತ್ತದೆ.

ಬೇಕಾಗುವ ಪದಾರ್ಥಗಳು:
ತಂಪಾದ ಹಾಲು – 1 ಗ್ಲಾಸ್
ಕಾಫಿ ಪುಡಿ – 1 ಚಮಚ
ಜೇನುತುಪ್ಪ – 1 ರಿಂದ 2 ಚಮಚ
ಐಸ್ ಕ್ಯೂಬ್ಸ್ – 5 ರಿಂದ 6
ಕ್ರೀಮ್ – 2 ಚಮಚ (ಐಚ್ಛಿಕ)
ಚಿಟಿಕೆ ದಾಲ್ಚಿನ್ನಿ ಪುಡಿ ಅಥವಾ ಕೋಕೋ ಪುಡಿ – ಅಲಂಕಾರಕ್ಕೆ

ಮಾಡುವ ವಿಧಾನ:
ಮೊದಲು ಮಿಕ್ಸಿ ಜಾರ್‌ಗೆ ತಂಪಾದ ಹಾಲು, ಕಾಫಿ ಪುಡಿ, ಜೇನುತುಪ್ಪ ಮತ್ತು ಐಸ್ ಕ್ಯೂಬ್ಸ್ ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ. ನೊರೆ ಬರುವವರೆಗೆ ಬ್ಲೆಂಡ್ ಮಾಡಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಬೇಕಿದ್ದರೆ ಸ್ವಲ್ಪ ಕ್ರೀಮ್ ಸೇರಿಸಿ ಮತ್ತೆ ಒಂದು ಬಾರಿ ತಿರುಗಿಸಿ.

ಈಗ ಗ್ಲಾಸ್‌ನ ಒಳಭಾಗಕ್ಕೆ ಸ್ವಲ್ಪ ಜೇನುತುಪ್ಪ ಸುರಿದು, ತಯಾರಿಸಿದ ಕಾಫಿಯನ್ನು ಹಾಕಿ. ಮೇಲ್ಭಾಗಕ್ಕೆ ಚಿಟಿಕೆ ಕೋಕೋ ಪುಡಿ ಅಥವಾ ದಾಲ್ಚಿನ್ನಿ ಪುಡಿ ಹಾಕಿ, ತಂಪಾಗಿ ಸರ್ವ್ ಮಾಡಿದರೆ, ಮನೆಯಲ್ಲೇ ಮಾಡಿದ ಈ ವೈರಲ್ ಹನಿ ಕೋಲ್ಡ್ ಕಾಫಿ ಮನಸ್ಸನ್ನೂ, ದೇಹವನ್ನೂ ರಿಫ್ರೆಶ್ ಮಾಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !