May 10, 2026
Sunday, May 10, 2026
spot_img

ಬಾಲಿವುಡ್ ಸ್ಟೈಲಿಶ್ ನಟಿ ಸೋನಂ ಮನೆಯಲ್ಲಿ ನಾಮಕರಣ ಸಂಭ್ರಮ: ಎರಡನೇ ಮಗುವಿನ ಹೆಸರೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:


ಬಾಲಿವುಡ್‌ನ ಸ್ಟೈಲಿಶ್ ದಂಪತಿ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಬದುಕಿನಲ್ಲಿ ಈಗ ಸಂಭ್ರಮದ ಎರಡನೇ ಅಧ್ಯಾಯ ಆರಂಭವಾಗಿದೆ. ಕಳೆದ ಮಾರ್ಚ್ 29 ಜನಿಸಿದ ಎರಡನೇ ನಗುವಿಗೆ ನಾಮಕರಣ ಮಾಡಿದ್ದಾರೆ.

ಶನಿವಾರ ಇನ್‌ಸ್ಟಾಗ್ರಾಮ್ ತಮ್ಮ ಇಬ್ಬರು ಮುದ್ದಾದ ಮಕ್ಕಳನ್ನು ಪರಿಚಯಿಸಿದ ಸೋನಂ, ತಮ್ಮ ಎರಡನೇ ಮಗನಿಗೆ ‘ರುದ್ರಲೋಖ್ ಕಪೂರ್ ಅಹುಜಾ’ ಎಂದು ನಾಮಕರಣ ಮಾಡಿರುವುದಾಗಿ ಹೀಳಿಕೊಂಡಿದ್ದಾರೆ.

ಈ ನಾಮಕರಣ ಕೇವಲ ಹೆಸರಿಗಷ್ಟೇ ಸೀಮಿತವಾಗಿಲ್ಲ, ಇದರ ಹಿಂದೆ ಒಂದು ನಂಬಿಕೆಯ ಕಥೆಯಿದೆ. ಪವಿತ್ರ ಏಕಾದಶಿಯ ದಿನದಂದು ಜನಿಸಿದ ಈ ಮಗು, ತಮಗೆ ಮಹಾವಿಷ್ಣುವಿನ ಆಶೀರ್ವಾದದಿಂದ ಸಿಕ್ಕ ಅತಿ ದೊಡ್ಡ ಕೊಡುಗೆ ಎಂದು ಸೋನಂ ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ಕಪೂರ್ ಮತ್ತು ಅಹುಜಾ ಎರಡು ಪ್ರಭಾವಿ ಕುಟುಂಬಗಳ ವಂಶೋದ್ಧಾರಕನಿಗೆ ತಾತ ಅನಿಲ್ ಕಪೂರ್ ಸೇರಿದಂತೆ ಇಡೀ ಕುಟುಂಬದ ಹಾರೈಕೆಯಿದೆ.

ತಮ್ಮ ಮೊದಲ ಮಗ ‘ವಾಯು’ ಮತ್ತು ಈಗಿನ ‘ರುದ್ರಲೋಖ್’ ಹೆಸರಿಗೂ ಇರುವ ಒಂದು ಅದ್ಭುತ ನಂಟನ್ನು ಸೋನಂ ವಿವರಿಸಿದ್ದಾರೆ. ವೇದಗಳ ಸಾರವನ್ನು ಉಲ್ಲೇಖಿಸಿರುವ ಅವರು, “ವಾಯು ಎಂದರೆ ಜಗತ್ತಿಗೆ ಜೀವವನ್ನು ಪೋಷಿಸುವ ತಂಗಾಳಿ. ಆದರೆ ರುದ್ರ ಎಂದರೆ ಅತ್ಯಂತ ಬಲಶಾಲಿ, ದುಃಖವನ್ನು ಮೂಲದಿಂದಲೇ ಕಿತ್ತೆಸೆಯುವ ಶಕ್ತಿ ಮತ್ತು ಧನಾತ್ಮಕ ರೂಪಾಂತರದ ಸಂಕೇತ” ಎಂದಿದ್ದಾರೆ. ಅಂದರೆ, ಒಬ್ಬ ಮಗ ಜಗತ್ತಿಗೆ ಜೀವ ನೀಡಿದರೆ, ಮತ್ತೊಬ್ಬ ಮಗ ಆ ಜೀವಕ್ಕೆ ರಕ್ಷಣೆಯ ಶಕ್ತಿಯಾಗಲಿದ್ದಾನೆ ಎಂಬುದು ಇವರ ಆಶಯವಾಗಿದೆ.

2018 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಸೋನಂ-ಆನಂದ್ ದಂಪತಿ ಈಗ ಇಬ್ಬರು ಗಂಡು ಮಕ್ಕಳ ಪೋಷಕರಾಗಿದ್ದಾರೆ.. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಇಬ್ಬರು ಸಹೋದರರ ಒಟ್ಟಿಗಿನ ಚಿತ್ರಕ್ಕೆ ಬಾಲಿವುಡ್‌ನ ಸ್ಟಾರ್ ನಟ-ನಟಿಯರು ಮತ್ತು ಲಕ್ಷಾಂತರ ಅಭಿಮಾನಿಗಳು ಪ್ರೀತಿಯ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !