October 14, 2026
Wednesday, October 14, 2026
spot_img

ಕಟೀಲು ದೇಗುಲದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 72 ಜೋಡಿಗಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ 72 ಸರಳ ವಿವಾಹ ನಡೆಯಿತು.

ಕಟೀಲು ದೇವಿಯ ಸನ್ನಿಧಿಯಲ್ಲಿ ಮದುವೆ ಆಗುತ್ತೇವೆಂದು ಹರಕೆ ಹೇಳಿಕೊಳ್ಳುವವರು, ಭಕ್ತಿಯಿಂದ ಇಚ್ಛಿಸಿದವರು ಅತ್ಯಂತ ಸರಳ ರೀತಿಯಲ್ಲಿ ವಿವಾಹ ಆಗುತ್ತಾರೆ. ಸಾಮಾನ್ಯವಾಗಿ 50, 60 ಜೋಡಿಗಳು ಮದುವೆ ಆಗುತ್ತಿದ್ದರು. ಆದರೆ ಇಂದು ನಡೆದ ಮದುವೆಗಳ ಸಂಖ್ಯೆ ಈ ವರುಷದ ಅತ್ಯಂತ ಹೆಚ್ಚು ಸಂಖ್ಯೆಯಾಗಿದೆ.

ವರುಷದಿಂದ ವರುಷ ಕಟೀಲು ದೇಗುಲದಲ್ಲಿ ವಿವಾಹ ಆಗುವವರ ಸಂಖ್ಯೆ ಹೆಚ್ಚುತ್ತಿದೆ. ವ್ಯವಸ್ಥಿತ ರೀತಿಯಲ್ಲಿ ಮದುವೆಯಾಗಲು ಅಥವಾ ಮದುವೆ ವ್ಯವಸ್ಥೆಯನ್ನು ಇನ್ನಷ್ಟು ವ್ಯವಸ್ಥಿತ ರೀತಿಯಲ್ಲಿ ಮಾಡಲು ದೇಗುಲದ ಆಡಳಿತ ಮಂಡಳಿ ಸಿದ್ಧವಾಗಬೇಕಾಗಿದೆ.

ವಾಹನಗಳ ಬ್ಲಾಕ್ ಹೆಚ್ಚುತ್ತಿದ್ದು, ಕಿಲೋಮೀಟರ್ ಗಟ್ಟಲೇ ವಾಹನಗಳು ನಿಲ್ಲುತ್ತಿವೆ. ಅನೇಕರು ರಸ್ತೆಯ ಬದಿಗಳಲ್ಲಿ ವಾಹನ ನಿಲ್ಲಿಸುವ ಪರಿಣಾಮ ಬ್ಲಾಕ್ ಮತ್ತಷ್ಟು ಹೆಚ್ಚುತ್ತಿದ್ದು ಸಮಸ್ಯೆ ಆಗುತ್ತಿದೆ. ನಂದಿನಿ ನದಿಯ ಸೇತುವೆಯನ್ನು ಅಗಲಗೊಳಿಸುವುದು ರಸ್ತೆಯ ಅಗಲದ ಅಗತ್ಯ ಇದೆ.

Must Read