ಹೊಸದಿಗಂತ ವರದಿ ಉತ್ತರ ಕನ್ನಡ:
ಒಂದೇ ಸರ್ವೇ ನಂಬರ್ ನ ರೈತರ ಗದ್ದೆಯಲ್ಲಿ ಎರಡು ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದರಿಂದ ವಿವಿಧ ಗ್ರಾಮಗಳಿಗೆ ತೆರಳುವ ರಸ್ತೆಯನ್ನು ಬಂದಮಾಡಿ ಶೆಡ್ ನಿರ್ಮಾಣ ಮಾಡಿ ರಸ್ತೆ ಬಂದ್ ಮಾಡಿದ ಘಟನೆ ಶನಿವಾರ ನಡೆದಿದೆ.
ತಾಲೂಕಿನ ಸಾಲವಾಂವ್ ಗ್ರಾಮದಿಂದ ತುಂಬರಗಿ ಗ್ರಾಮಕ್ಕೆ ರೈತರ ಜಮೀನಿನಲ್ಲಿ ಹಾದು ಹೋಗಿರುವ ರಸ್ತೆಯ ಮಧ್ಯೆ ಗದ್ದೆಯ ರೈತರು ಶೆಡ್ ನಿರ್ಮಾಣ ಮಾಡಿದ್ದಾರೆ.
ಕಳೆದ ಹಲವು ವರ್ಷಗಳ ಹಿಂದೆ ಸಾಲಗಾಂವ್ ಗ್ರಾಮದ ಸರ್ವೆ ನಂ.116, 117, 66, 67ರಲ್ಲಿ ಹಿರಿಯರ ಒಪ್ಪಿಗೆ ಮೇರೆಗೆ ರೈತರ ಜಮೀನಿನ ಮೂಲಕ ತುಂಬರಗಿ ಗ್ರಾಮಕ್ಕೆ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು.
ಆದರಿಗ ಒಂದೇ ಸರ್ವೆ ನಂಬರ್‌ನಲ್ಲಿ ನಕಾಶೆಯಲ್ಲಿರುವ ಜಾಗದಲ್ಲಿ ಕೆಲವರು ಎರಡನೇ ರಸ್ತೆ ಮಾಡಲು ಮುಂದಾಗಿದ್ದಾರೆ. ಎರಡನೇ ರಸ್ತೆಗೆ ರೈತರು ಜಾಗ ಕೊಡುವುದರಿಂದ ಅನ್ಯಾಯವಾಗುತ್ತಿದೆ ಎಂದು ರೈತರು ಆರೋಪಿಸಿ ನಕಾಶೆಯಲ್ಲಿ ಇದ್ದ ಜಾಗದಲ್ಲೇ ರಸ್ತೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಈಗಿರುವ ಹಳೆಯ ರಸ್ತೆಯ ಮಧ್ಯೆ ಶೆಡ್ ನಿರ್ಮಾಣ ಮಾಡಿ ರಸ್ತೆ ಬಂದ್ ಮಾಡಿದ್ದಾರೆ.
ಇದನ್ನೂ ಓದಿ:
ಕೆಲ ವ್ಯಕ್ತಿಗಳು ತಮ್ಮ ಹೊಲಗಳಗೆ ಹೋಗಲು ತೊಂದರೆಯಾಗುತ್ತಿದೆ ಎಂದು ತಮ್ಮ ಖರ್ಚಿನಲ್ಲೆ ನಕಾಶೆಯಲ್ಲಿ ಇರುವ ಜಾಗದಲ್ಲಿ ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ಈ ಕುರಿತು ತಹಸೀಲ್ದಾರ್ ಶಂಕರ ಗೌಡಿ ಅವರ ಗಮನಕ್ಕೆ ತಂದಿದ್ದು, ಸರಕಾರದ ಆದೇಶದಂತೆ ನಕಾಶೆಯಲ್ಲಿ ಇರುವ ಜಾಗದಲ್ಲಿ ರಸ್ತೆ ಮಾಡಲು ಅವಕಾಶವಿದೆ. ಹೀಗಾಗಿ ಹಳೆಯ ರಸ್ತೆಯನ್ನೆ ಕೃಷಿಗೆ ಬಳಸಿಕೊಳ್ಳಿ ಎಂದು ತಹಸೀಲ್ದಾರ್ ಹೇಳಿರುವುದಾಗಿ ರೈತರು ತಿಳಿಸಿದ್ದಾರೆ.
ಸಾಲಗಾಂವ್ ಮಾರ್ಗವಾಗಿ ತುಂಬರಗಿ ಅಂದಲಗಿ ಗ್ರಾಮಕ್ಕೆ ಹೋಗಲು ಇದು ಪ್ರಮುಖ ರಸ್ತೆಯಾಗಿದೆ. ಈ ಏಕಾಏಕಿ ರೈತರು ರಸ್ತೆಯ ಮಧ್ಯೆ ಶೆಡ್ ನಿರ್ಮಿಸಿ ರಸ್ತೆ ಬಂದ್ ಮಾಡಿರುವುದಿರಂದ ಗ್ರಾಮಸ್ಥರಿಗೆ ಹೋಗಲು ಸಮರ್ಪಕ ರಸ್ತೆ ಇಲ್ಲದಂತಾಗಿದೆ. ಇದರಿಂದ ಸಾಲಗಾಂವ್ ಗ್ರಾಮದಿಂದ ತುಂಬರಗಿ ಗ್ರಾಮಕ್ಕೆ ತೆರಳಲು ಎರಡು ದಿನಗಳಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈಗಿರುವ ಹಳೆಯ ರಸ್ತೆ ಬಂದ್ ಮಾಡಿರುವುದರಿಂದ ತುಂಬರಗಿ, ಅಂದಲಗಿ ಗ್ರಾಮಸ್ಥರು ಪರದಾಟ ಒಂದೆಡೆಯಾದರೆ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇಲ್ಲಿನ ರಸ್ತೆಯ ಸಮಸ್ಯೆ ಬಗೆಹರಿಸುವರೆಗೂ ರಸ್ತೆಯ ಮಧ್ಯೆದಲ್ಲಿನ ಶೆಡ್ ತೆರವು ಮಾಡುವುದಿಲ್ಲವೆಂದು ರೈತರು ಪಟ್ಟು ಹಿಡಿದಿದ್ದಾರೆ.
ಒಂದೇ ಸರ್ವೆ ನಂಬರನಲ್ಲಿ ಎರಡು ರಸ್ತೆ ಕೊಡುವುದರಿಂದ ರೈತರಗೆ ಅನ್ಯಾಯವಾಗುತ್ತದೆ. ಹೀಗಾಗಿ ಹಳೆಯ ರಸ್ತೆಯಲ್ಲಿ ಶೆಡ್ ನಿರ್ಮಾಣ ಮಾಡಿ ರಸ್ತೆ ಬಂದ್ ಮಾಡಿದ್ದೇವೆ. ಕೆಲವು ರೈತರು ಗ್ರಾಮಸ್ಥರು ಆರೋಪಿಸಿದರು.



