ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದ ಅತಿದೊಡ್ಡ ಸಿನಿಮಾ ಎಂಬ ಖ್ಯಾತಿಗೆ ಭಾಜನವಾಗಿರುವ ನಿರ್ದೇಶಕ ಎಸ್.ಎಸ್. ರಾಜಮೌಳಿ ಮತ್ತು ಸೂಪರ್ ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್‌ನ ಮೊದಲ ಚಿತ್ರ ‘ವಾರಣಾಸಿ’ ಈಗ ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿಯಲ್ಲಿದೆ. ಈ ಹೈ-ವೋಲ್ಟೇಜ್ ಅಡ್ವೆಂಚರ್ ಆಕ್ಷನ್ ಥ್ರಿಲ್ಲರ್ ಮೇಲೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದು, ಇದೀಗ ಚಿತ್ರದ ಕುರಿತು ಮಹತ್ವದ ಅಪ್‌ಡೇಟ್ ಒಂದು ಹೊರಬಿದ್ದಿದೆ.
ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಅವರು ಈ ಅದ್ದೂರಿ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಈ ಹಿಂದೆಯೇ ಖಚಿತವಾಗಿತ್ತು. ಇದೀಗ ಅವರು ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಬಗ್ಗೆ ಸ್ವತಃ ಮಾಹಿತಿ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿರುವ ಅವರು, ‘ವಾರಣಾಸಿ, ಹಿಯರ್ ವಿ ಗೋ’ ಎಂದು ಬರೆಯುವ ಮೂಲಕ ಹೊಸ ಶೆಡ್ಯೂಲ್‌ನಲ್ಲಿ ತಾವು ಭಾಗವಹಿಸುತ್ತಿರುವುದನ್ನು ಅಧಿಕೃತಗೊಳಿಸಿದ್ದಾರೆ.
ಕೆಲವು ದಿನಗಳ ಹಿಂದೆ, ಈ ಸಿನಿಮಾದ ಚಿತ್ರೀಕರಣಕ್ಕೆ ನೀರಿನ ಸಮಸ್ಯೆಯಿಂದಾಗಿ ಅಡೆತಡೆ ಉಂಟಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಚಿತ್ರದ ವಿಶೇಷ ಸೀಕ್ವೆನ್ಸ್‌ಗಾಗಿ ನಿರ್ದೇಶಕರು 150 ಟ್ಯಾಂಕರ್ ನೀರಿನ ಬೇಡಿಕೆ ಇಟ್ಟಿದ್ದರು. ಆದರೆ, ಹೈದರಾಬಾದ್‌ನಲ್ಲಿ ಬೇಸಿಗೆಯ ಕಾರಣ ನೀರಿನ ಕೊರತೆ ಇರುವುದರಿಂದ ಜಲ ಮಂಡಳಿಯು ಅಷ್ಟು ನೀರು ಪೂರೈಸಲು ನಿರಾಕರಿಸಿತ್ತು. ಆದರೆ, ಈಗ ರಾಜಮೌಳಿ ಅವರು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಂಡು ಚಿತ್ರೀಕರಣವನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದಾರೆ ಎಂಬುದು ಪ್ರಿಯಾಂಕಾ ಅವರ ಅಪ್‌ಡೇಟ್‌ನಿಂದ ಸ್ಪಷ್ಟವಾಗಿದೆ.



