May 11, 2026
Monday, May 11, 2026
spot_img

ಪ್ರಧಾನಿ ಕರೆಯನ್ನು ಬೆಂಬಲಿಸಿ ಸದೃಢ ಭಾರತದ ನಿರ್ಮಾಣಕ್ಕೆ ಕೈಜೋಡಿಸೋಣ: ಸಿ.ಟಿ.ರವಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಂಧನಗಳ ಮಿತ ಬಳಕೆ, ಒಂದು ವರ್ಷಗಳ ಕಾಲ ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ಮೋದಿ ನೀಡಿರುವ ಕರೆಯನ್ನು ನಾವೆಲ್ಲರೂ ಬೆಂಬಲಿಸೋಣ ಎಂದು ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಮ್ಮ ದೇಶವನ್ನು ವಿಪತ್ತಿನಿಂದ ಪಾರಾಗಲು ಪ್ರಧಾನಿ ಮೋದಿಯವರು ಈ ಕರೆಕೊಟ್ಟಿದ್ದಾರೆ. ನಾವು ಹೊರದೇಶಗಳಿಂದ ಖರೀದಿ ಮಾಡುವುದನ್ನು ಕಡಿಮೆಗೊಳಿಸಬೇಕು. ಈ ಮೂಲಕ ಸ್ವಾವಲಂಬನೆ ಕಡೆಗೆ ಹೆಜ್ಜೆ ಹಾಕಬೇಕಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ನಾವು ವಿಪತ್ತಿನಿಂದ ಪಾರಾಗುತ್ತೇವೆ. ಇದಕ್ಕಾಗಿ ನಾವು ಎಲ್ಲರೂ ಅನಗತ್ಯ ಬಳಕೆಯನ್ನು ನಿಲ್ಲಿಸಬೇಕಾಗಿದೆ. ಈ ಮೂಲಕ ಸದೃಢ ಭಾರತದ ನಿರ್ಮಾಣಕ್ಕಾಗಿ ನಾವೆಲ್ಲರೂ ಕೈಜೋಡಿಸೋಣ ಎಂದು ಸಿ.ಟಿ.ರವಿ ಹೇಳಿದ್ದಾರೆ.

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಒಂದು ವರ್ಷ ವಿದೇಶಿ ಪ್ರವಾಸ ಮುಂದೂಡಲು, ಇಂಧನಗಳ ಮಿತ ಬಳಕೆಗೆ ಹಾಗೂ ಒಂದು ವರ್ಷಗಳ ಕಾಲ ಚಿನ್ನ ಖರೀದಿಸಬೇಡಿ ಎಂದು ಜನತೆಗೆ ಕರೆ ನೀಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !