May 12, 2026
Tuesday, May 12, 2026
spot_img

Timಅಣ್ಣ ಬೆರಳು ತೋರಿಸಿದ್ದೇ ದುಬಾರಿ ಆಯ್ತು: RCB ಗೆದ್ದ ಸಂಭ್ರಮದಲ್ಲೇ ಡೇವಿಡ್‌ಗೆ ಬಿಗ್ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹೈವೋಲ್ಟೇಜ್ ಪಂದ್ಯ ಇದೀಗ ಹೊಸ ವಿವಾದಕ್ಕೂ ಕಾರಣವಾಗಿದೆ.

ರಾಯಪುರದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿದ್ದ ವೇಳೆ ಟಿಮ್ ಡೇವಿಡ್ ಮಾಡಿದ ಅಸಭ್ಯ ವರ್ತನೆ ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಒಂದು ಸನ್ನೆ ಇದೀಗ ಅವರಿಗೆ ಭಾರೀ ದಂಡ ತಂದುಕೊಟ್ಟಿದೆ.

ಪಂದ್ಯ ಮುಗಿದ ಬಳಿಕ ಟಿಮ್ ಡೇವಿಡ್ ಕ್ಯಾಮೆರಾ ಎದುರೇ ಮಧ್ಯದ ಬೆರಳು ತೋರಿಸಿದ್ದಾಗಿ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿ ಐಪಿಎಲ್ ಆಡಳಿತ ಮಂಡಳಿ ಕ್ರಮ ಕೈಗೊಂಡಿದ್ದು, ಐಪಿಎಲ್ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. ಈ ನಡೆ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಮ್ಯಾಚ್ ರೆಫರಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಟಿಮ್ ಡೇವಿಡ್‌ಗೆ ಪಂದ್ಯದ ಸಂಭಾವನೆಯ ಶೇಕಡಾ 30ರಷ್ಟು ದಂಡ ವಿಧಿಸಿದ್ದಾರೆ. ಜೊತೆಗೆ ಅವರಿಗೆ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ಕೂಡ ನೀಡಲಾಗಿದೆ. ಮತ್ತಷ್ಟು ನಿಯಮ ಉಲ್ಲಂಘನೆ ನಡೆದರೆ ಮುಂದಿನ ಪಂದ್ಯಗಳಲ್ಲಿ ನಿಷೇಧದ ಭೀತಿ ಎದುರಾಗುವ ಸಾಧ್ಯತೆಯೂ ಇದೆ.

ಇತ್ತ ಪಂದ್ಯದಲ್ಲಿ ಆರ್‌ಸಿಬಿ ಕೊನೆಯ ಓವರ್‌ವರೆಗೂ ಹೋರಾಡಿ ರೋಚಕ ಜಯ ಸಾಧಿಸಿತ್ತು. ಕೃನಾಲ್ ಪಾಂಡ್ಯ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಅಂತಿಮ ಕ್ಷಣದ ಜವಾಬ್ದಾರಿಯುತ ಆಟ ತಂಡಕ್ಕೆ ಗೆಲುವು ತಂದುಕೊಟ್ಟಿತು. ಆದರೆ ಗೆಲುವಿನ ಸಂಭ್ರಮದ ನಡುವೆ ಟಿಮ್ ಡೇವಿಡ್ ನಡೆ ಈಗ ಹೊಸ ವಿವಾದಕ್ಕೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !