May 12, 2026
Tuesday, May 12, 2026
spot_img

ಪಿಎಂ-ಇ-ಡ್ರೈವ್ ಯೋಜನೆಯಡಿ ಕರ್ನಾಟಕಕ್ಕೆ 1,243 ಇವಿ ಚಾರ್ಜಿಂಗ್ ಕೇಂದ್ರಗಳು ಮಂಜೂರು: ಎಚ್‌ಡಿ ಕುಮಾರಸ್ವಾಮಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನ ಮಂತ್ರಿ ಇ-ಡ್ರೈವ್ ಯೋಜನೆಯಡಿ ಕರ್ನಾಟಕಕ್ಕೆ 1,243 ಸಹಿತ ವಿವಿಧ ರಾಜ್ಯಗಳು ಮತ್ತು ಸಿಪಿಎಸ್‌ಯುಗಳಲ್ಲಿ 4,874 ಇವಿ ಚಾರ್ಜರ್‌ಗಳ ಸ್ಥಾಪನೆಗೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಮಂಗಳವಾರ ಅನುಮೋದನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಪಿಎಂ ಇ-ಡ್ರೈವ್ ಯೋಜನೆಯಡಿಯಲ್ಲಿ ರಾಷ್ಟ್ರವ್ಯಾಪಿ ವಿದ್ಯುತ್ ವಾಹನ ಚಾರ್ಜಿಂಗ್ ಮೂಲಸೌಕರ್ಯ ಕುರಿತು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಈಗಾಗಲೇ ಪ್ರಮುಖ ಇವಿ ಚಾರ್ಜಿಂಗ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಸ್ವಚ್ಛ ಚಲನಶೀಲತೆಯತ್ತ ದೇಶದ ಪರಿವರ್ತನೆಗೆ ರಾಜ್ಯಗಳು ಸಕ್ರಿಯವಾಗಿ ಕೈಜೋಡಿಸಬೇಕೆಂದು ಅವರು ಕರೆ ನೀಡಿದರು.

ದೇಶದ ವಿವಿಧ ರಾಜ್ಯಗಳು ಹಾಗೂ ಸಿಪಿಎಸ್‌ಯುಗಳಲ್ಲಿ ಕೇಂದ್ರ ಸಾರ್ವಜನಿಕ ವಲಯದ ಕಂಪನಿಗಳ ಮೂಲಕ 4,874 ಇವಿ ಚಾರ್ಜರ್‌ಗಳ ಸ್ಥಾಪನೆಗೆ ಇದುವರೆಗೆ ರೂ. 503.86 ಕೋಟಿ ಮೊತ್ತದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಅದರಲ್ಲಿ ಕರ್ನಾಟಕಕ್ಕೆ 1,243 ಇವಿ ಚಾರ್ಜರ್‌ಗಳ ಸ್ಥಾಪನೆಯಾಗಲಿದ್ದು, ಅದಕ್ಕೆ ಒಟ್ಟು ರೂ. 123.26 ಕೋಟಿ ವೆಚ್ಚವಾಗಲಿದೆ ಎಂದರು.

ದೇಶದ ಇವಿ ಕ್ಷೇತ್ರವನ್ನು ಬಲಪಡಿಸಲು ಕೇಂದ್ರ ಸರ್ಕಾರವು ಈಗಾಗಲೇಬ್ಯಾಟರಿ ಸೆಲ್ ಉತ್ಪಾದನೆಗೆ ರೂ. 18,100 ಕೋಟಿ ವೆಚ್ಚದ ಪಿಎಲ್ಐ ಎಸಿಸಿ ಯೋಜನೆ, ಸ್ವಚ್ಛ ವಾಹನಗಳ ಉತ್ತೇಜನಕ್ಕಾಗಿ ರೂ. 25,938 ಕೋಟಿ ಪಿಎಲ್ಐ ಆಟೋ ಯೋಜನೆ ಹಾಗೂ ಅಪರೂಪದ ಭೂಮಿಯ ಮ್ಯಾಗ್ನೆಟ್ ಉತ್ಪಾದನೆಗಾಗಿ ಆರಂಭಿಸಲಾದ ರೂ. 7,280 ಕೋಟಿ ಆರ್‌ಇಪಿಎಂ ಯೋಜನೆಗಳು ಕೈಗೊಂಡಿದೆ ಎಂದು ಹೇಳಿದರು.

ದೇಶವ್ಯಾಪಿ ಚಾರ್ಜಿಂಗ್ ಜಾಲವನ್ನು ನಿರ್ಮಿಸುವ ಸಲುವಾಗಿ ರೂ. 2,000 ಕೋಟಿ ಸಾರ್ವಜನಿಕ ಇವಿ ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ಮೀಸಲಾಗಿ ಇಡಲಾಗಿದೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !