November 15, 2026
Sunday, November 15, 2026
spot_img

ಯುವತಿಯಿಂದ ಬ್ಲ್ಯಾಕ್‌ಮೇಲ್, ಮದುವೆಗೆ ಒತ್ತಾಯ: ರೈಲಿಗೆ ತಲೆಕೊಟ್ಟು 28 ವರ್ಷದ ಎಸ್‌ಐ ಆತ್ಮಹ*ತ್ಯೆ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಯುವತಿಯೊಬ್ಬಳ ಬ್ಲ್ಯಾಕ್‌ಮೇಲ್ ಹಾಗೂ ಮದುವೆಯ ಒತ್ತಡಕ್ಕೆ ಬೇಸತ್ತ 28 ವರ್ಷದ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ರೈಲು ಹಳಿಯ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಸಂತ ಕಬೀರ್ ನಗರ ಮೂಲದ ಸಂದೀಪ್ ಕುಮಾರ್ (28) ಎಂದು ಗುರುತಿಸಲಾಗಿದ್ದು, ಇವರು ಕಳೆದ 11 ತಿಂಗಳಿನಿಂದ ಬಲ್ಲಿಯಾದ ಚಿತ್‌ಬರಗಾಂವ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಘಟನೆ ನಡೆದಿದ್ದು ಹೇಗೆ?

ಶನಿವಾರ ರಾತ್ರಿ 7 ರಿಂದ 8 ಗಂಟೆಯ ಸುಮಾರಿಗೆ ವ್ಯಕ್ತಿಯೊಬ್ಬರು ರೈಲು ಹಳಿಯ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮುಂದಿನ ನಿಲ್ದಾಣದಲ್ಲಿ ರೈಲ್ವೆ ಲೋಕೋ ಪೈಲಟ್ ವರದಿ ನೀಡಿದ್ದರು. ಈ ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ಹಳಿಯ ಸಮೀಪದಲ್ಲೇ ಬುಲೆಟ್ ಬೈಕ್ ಒಂದು ನಿಂತಿರುವುದು ಪತ್ತೆಯಾಗಿದೆ. ಬಳಿಕ ನಡೆಸಿದ ತನಿಖೆಯಲ್ಲಿ ಮೃತ ವ್ಯಕ್ತಿ ಎಸ್‌ಐ ಸಂದೀಪ್ ಕುಮಾರ್ ಎಂಬುದು ದೃಢಪಟ್ಟಿದೆ ಎಂದು ಎಸ್‌ಪಿ ಇರಾಜ್ ರಾಜಾ ಭಾನುವಾರ ತಿಳಿಸಿದ್ದಾರೆ.

ಬ್ಲ್ಯಾಕ್‌ಮೇಲ್, ಮದುವೆ ಒತ್ತಡದ ಆರೋಪ

ಪ್ರಾಥಮಿಕ ತನಿಖೆಯ ಪ್ರಕಾರ, ಸಂದೀಪ್ ಕುಮಾರ್ ಅವರು ಸಿಕಂದರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿಯೊನ್ನು ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಆ ಯುವತಿಯು ತನ್ನನ್ನು ಮದುವೆಯಾಗುವಂತೆ ತೀವ್ರ ಒತ್ತಡ ಹೇರುತ್ತಿದ್ದಳು ಮತ್ತು ಅವರಿಗೆ ಬ್ಲ್ಯಾಕ್‌ಮೇಲ್ ಕೂಡ ಮಾಡುತ್ತಿದ್ದಳು ಎನ್ನಲಾಗಿದೆ. ಇದೇ ಕಿರುಕುಳ ತಾಳಲಾರದೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ವಿಶೇಷವೆಂದರೆ, ಇದೇ ಯುವತಿ ಎರಡು ವರ್ಷಗಳ ಹಿಂದೆ ಮತ್ತೊಬ್ಬ ಪೊಲೀಸ್ ಅಧಿಕಾರಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು ಎಂಬ ಸಂಗತಿಯನ್ನೂ ಎಸ್‌ಪಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:

ಮುಂದಿನ ಕಾನೂನು ಕ್ರಮ

ಘಟನೆಯ ಕುರಿತು ಮೃತ ಸಂದೀಪ್ ಕುಮಾರ್ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Must Read

Skip to toolbar