ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಆಭರಣ ಪ್ರಿಯರಿಗೆ ಚಿನ್ನದ ದರ ಮತ್ತೊಮ್ಮೆ ಬಿಗ್ ಶಾಕ್ ನೀಡಿವೆ. ಜಾಗತಿಕ ಮಾರುಕಟ್ಟೆಯ ಏರಿಳಿತ ಹಾಗೂ ಸ್ಥಳೀಯ ಬೇಡಿಕೆಯ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಂದೂ ಕೂಡ ಏರಿಕೆ ಹಾದಿಯಲ್ಲೇ ಮುಂದುವರಿದಿದೆ.
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಒಂದು ವರ್ಷ ಚಿನ್ನ ಖರೀದಿ ಮಾಡಬೇಡಿ ಎಂದು ಇತ್ತೀಚೆಗೆ ನೀಡಿದ್ದ ಮಹತ್ವದ ಕರೆಯ ನಡುವೆಯೂ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಗ್ರಾಹಕರ ಜೇಬಿಗೆ ಭಾರಿ ಕತ್ತರಿ ಬೀಳುವಂತಾಗಿದೆ.
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,41,160 ರೂ. ಆಗಿದ್ದು, ಪ್ರತಿ ಗ್ರಾಂ 14,225 ರೂ. ಆಗಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಅಪರಂಜಿ ಚಿನ್ನದ ಇಂದಿನ ಮಾರುಕಟ್ಟೆ ಬೆಲೆ 1,53,990 ರೂ.ಗೆ ತಲುಪಿದ್ದು, ಪ್ರತಿ ಗ್ರಾಂಗೆ 15,399 ರೂ. ಆಗಿದೆ.
ಇನ್ನು, 100 ಗ್ರಾಮ್ ಬೆಳ್ಳಿ ಬೆಲೆ 31,000 ರೂ.ಇದ್ದು, ತಮಿಳುನಾಡು, ಕೇರಳ ಮೊದಲಾದ ಕಡೆ ಈ ಲೋಹದ ಬೆಲೆ 33,000 ರೂ. ಗೆ ಏರಿಕೆಯಾಗಿದೆ.



