ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಜನಪ್ರಿಯ ನಟ ದಿಲೀಪ್ ರಾಜ್ ಇಂದು ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಉತ್ತರಹಳ್ಳಿಯ ರಾಜ್ಶ್ರೀ ನಿವಾಸದಲ್ಲಿ ಅಂತಿಮ ದರುಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗದ ಗಣ್ಯರು, ಸ್ನೇಹಿತರು ಆಗಮಿಸಿ ಅಂತಿಮ ದರುಶನ ಪಡೆಯುತ್ತಿದ್ದಾರೆ. ದರುಶನದ ನಂತರ ದಿಲೀಪ್ ಗೆಳೆಯ ರವಿಶಂಕರ್ ಗೌಡ ಮಾತನಾಡಿದ್ದು, ಆತನಿಗೆ ಒಂದು ಕೆಟ್ಟ ಅಭ್ಯಾಸ ಇರಲಿಲ್ಲ. ಅರ್ಧ ಗಂಟೆ ಟೈಮ್ ಇದ್ರೂ ಜಿಮ್ಗೆ ಹೋಗ್ತಿದ್ದ.
ಫಿಟ್ನೆಸ್ ಬಗ್ಗೆ ತುಂಬಾ ಆಸಕ್ತಿ ಇತ್ತು. ಜಂಕ್ ಫುಡ್ ಮುಟ್ಟುತ್ತಿರಲಿಲ್ಲ. ಆರೋಗ್ಯಕ್ಕೂ ಸಾವಿಗೂ ಸಂಬಂಧವೇ ಇಲ್ಲವೇ ಎನಿಸುತ್ತದೆ. ಎಲ್ಲರೂ ಕರೆದಾಗ ಹೋಗ್ತಾ ಇರಬೇಕು ಎನಿಸುತ್ತದೆ. ಕಷ್ಟಪಟ್ಟು ಕೆಲಸ ಮಾಡಿ ಮುಂದೆ ಬಂದಿದ್ದ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಣ್ಣೀರಿಟ್ಟಿದ್ದಾರೆ.



