May 13, 2026
Wednesday, May 13, 2026
spot_img

ವೃಷಭ ಮಾಸದ ಪೂಜೆ: ನಾಳೆ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ಓಪನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವೃಷಭ ಮಾಸದ ಪೂಜೆಗಾಗಿ ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದ ಬಾಗಿಲು ಮೇ 14 ರಂದು ಸಂಜೆ 5 ಗಂಟೆಗೆ ತೆರೆಯಲಿದೆ.
ತಂತ್ರಿವರ್ಯ ಕಂಠರರ್ ಮಹೇಶ್ ಮೋಹನರ್ ಅವರ ಸಮ್ಮುಖದಲ್ಲಿ ಪ್ರಧಾನ ಅರ್ಚಕ ಇ.ಡಿ.ಪ್ರಸಾದ್ ನಂಬೂದಿರಿ ದೇವಾಲಯ ಬಾಗಿಲು ತೆರೆದು ದೀಪ ಬೆಳಗಿಸಲಿದ್ದಾರೆ.

ಬಳಿಕ 18ನೇ ಮೆಟ್ಟಲಿನ ಕೆಳಗಿನ ಯಜ್ಞಕುಂಡದಲ್ಲಿ ಅಗ್ನಿ ಬೆಳಗಿಸುವರು.

ವೃಷಭ ಮಾಸದ ಮೊದಲ ದಿನವಾದ ಮೇ 15 ರಂದು ಬೆಳಗ್ಗೆ 5 ಗಂಟೆಗೆ ದೇವಾಲಯವು ದರುಶನಕ್ಕಾಗಿ ಬಾಗಿಲು ತೆರೆಯಲಿದೆ. ನಂತರ ಅಯ್ಯಪ್ಪ ಭಕ್ತರಿಗೆ ದರುಶನಕ್ಕೆ ಅವಕಾಶ ನೀಡಲಾಗುವುದು. ಅಂದು ದೀಪಾರಾಧನೆಯ ನಂತರ18ನೇ ಮೆಟ್ಟಲಲ್ಲಿ ಪಡಿಪೂಜೆ ಇರುತ್ತದೆ.

ಮೇ 19ರಂದು ರಾತ್ರಿ 10 ಗಂಟೆಗೆ ಶ್ರೀ ಕ್ಷೇತ್ರದ ಬಾಗಿಲು ಮುಚ್ಚಲಿದೆ. ಶಬರಿಮಲೆಗೆ ಭೇಟಿ ದರ್ಶನಕ್ಕೆ ಆಗಮಿಸುವ ಭಕ್ತರು ವರ್ಚುವಲ್ www.sabarimalaonline.org ಮೂಲಕ ಬುಕ್ಕಿಂಗ್ ಮಾಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !