May 14, 2026
Thursday, May 14, 2026
spot_img

ನಾವು ಯಾವುದೇ ದಿಗ್ಬಂಧನ ಹಾಕಿಲ್ಲ, ಸಮಸ್ಯೆಗೆ ಕಾರಣ ಅವ್ರೆ..! ಇರಾನ್ ಹೇಳಿದ್ದು ಯಾರ ಬಗ್ಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ಯುದ್ಧಭೀತಿಯ ವಾತಾವರಣ ಮುಂದುವರಿದಿರುವ ನಡುವೆಯೇ ಜಾಗತಿಕ ತೈಲ ಸಾಗಣೆಗೆ ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿ ಕುರಿತು ಇರಾನ್ ಮಹತ್ವದ ಹೇಳಿಕೆ ನೀಡಿದೆ.

ವಾಣಿಜ್ಯ ಹಡಗುಗಳ ಸಂಚಾರಕ್ಕೆ ಯಾವುದೇ ತಡೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಇರಾನ್, ಎಲ್ಲಾ ಹಡಗುಗಳು ತಮ್ಮ ನೌಕಾಪಡೆಯೊಂದಿಗೆ ಸಮನ್ವಯ ಮಾಡಿಕೊಂಡು ಸಾಗಬೇಕು ಎಂದು ತಿಳಿಸಿದೆ.

ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಗೆ ಮುನ್ನ ನವದೆಹಲಿಯಲ್ಲಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ, ಅಮೆರಿಕದ ನಿರ್ಬಂಧಗಳು ಮತ್ತು ಪ್ರಾದೇಶಿಕ ಸಂಘರ್ಷದಿಂದ ಪರಿಸ್ಥಿತಿ ಸಂಕೀರ್ಣಗೊಂಡಿದೆ ಎಂದರು. ಆದರೂ ಜಲಮಾರ್ಗವನ್ನು ಬಂದ್ ಮಾಡುವ ಉದ್ದೇಶ ಇರಾನ್‌ಗೆ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ:

ಹಾರ್ಮುಜ್ ಜಲಸಂಧಿ ಮೂಲಕವೇ ವಿಶ್ವದ ದೊಡ್ಡ ಪ್ರಮಾಣದ ಕಚ್ಚಾತೈಲ ಸಾಗಣೆ ನಡೆಯುವುದರಿಂದ ಜಾಗತಿಕ ಮಾರುಕಟ್ಟೆ ಈ ಬೆಳವಣಿಗೆಯನ್ನು ಕಣ್ಣಿಟ್ಟಿದೆ. ಇರಾನ್ ಯಾವುದೇ ಅಡೆತಡೆ ಸೃಷ್ಟಿಸಿಲ್ಲ, ಸಮಸ್ಯೆಗೆ ಅಮೆರಿಕದ ನಿರ್ಬಂಧಗಳೇ ಕಾರಣ ಎಂದು ಅರಘ್ಚಿ ಆರೋಪಿಸಿದರು.

ಅಮೆರಿಕ ವಿಧಿಸಿರುವ “ಅಕ್ರಮ ದಿಗ್ಬಂಧನ” ತೆಗೆದುಹಾಕಿದರೆ ಪರಿಸ್ಥಿತಿ ಸಹಜವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !