September 4, 2026
Friday, September 4, 2026
spot_img

ರಾಮಾಯಣದ ನಂತರ ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ ರಣ್‌ಬೀರ್‌ ಕಪೂರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಟ ರಣ್‌ಬೀರ್‌ ಕಪೂರ್‌ ಬಾಲಿವುಡ್‌ನ ಬಿಗ್‌ ಬಜೆಟ್‌ ಸಿನಿಮಾ ರಾಮಾಯಣದಲ್ಲಿ ರಾಮನ ಪಾತ್ರ ಮಾಡ್ತಿದ್ದಾರೆ. ಈ ಮಧ್ಯೆ ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಕೋಟಿ ರೂಪಾಯಿ ಮೌಲ್ಯದ ಜಮೀನೊಂದನ್ನು ಖರೀದಿ ಮಾಡಿದ್ದಾರೆ.

ಅಯೋಧ್ಯೆಯ ಸೆಳೆತ ಹಾಗೂ ರಾಮನ ಆಧ್ಯಾತ್ಮಿಕ ಶಕ್ತಿಗೆ ಮಾರು ಹೋಗಿರುವ ರಣ್‌ಬೀರ್‌ ಕಪೂರ್‌ ಅಯೋಧ್ಯೆಯ ಪುಣ್ಯ ಭೂಮಿಯನ್ನು ತೆಗೆದುಕೊಂಡು ಮುದ್ರೆ ಹಾಕಿಕೊಂಡಿದ್ದಾರೆ.

ರಿಯಲ್‌ ಎಸ್ಟೇಟ್‌ ಸಂಸ್ಥೆಯೊಂದರ ಮೂಲಕ ಜಮೀನು ಖರೀದಿ ಮಾಡಿದ್ದಾರೆ. ಇದರ ಮೌಲ್ಯ 3.31 ಕೋಟಿ ರೂಪಾಯಿಯಾಗಿದ್ದು, 2,134 ಚದರ ಅಡಿ ಚದರ ಹೊಂದಿದೆ. ನಾನು ಅಯೋಧ್ಯೆಯನ್ನು ಆಯ್ಕೆ ಮಾಡಿಲ್ಲ. ಅಯೋಧ್ಯೆಯೇ ನನ್ನನ್ನು ಆಯ್ಕೆ ಮಾಡಿದೆ. ನಾನು ಶ್ರೀರಾಮನ ಪಾತ್ರ ಮಾಡುತ್ತಿರುವುದು ಅದೃಷ್ಟ. ನಮ್ಮ ಇತಿಹಾಸ ಇರುವ ಜಾಗದಲ್ಲಿ ಭೂಮಿ ತೆಗೆದುಕೊಂಡಿದ್ದು ಸಂತಸದ ಸುದ್ದಿ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !