ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಜಾಬ್ ಇವತ್ತಿಂದಲ್ಲ, ಬಿಜೆಪಿ ಇದನ್ನು ಹಾಕಬಾರದು ಅಂತ ಹೇಳಿತ್ತು, ಆದರೆ ನಾವು ಹಾಕ್ಕೋಳಿ ಅಂತ ಹೇಳ್ತಾ ಇದಿವಿ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಯಾವ ಬದಲಾವಣೆನೂ ಮಾಡಿಲ್ವಾ ಎಂದು ಗೃಹ ಸಚಿವ ಜಿ. ಪರಮೇಶ್ವರ ಪ್ರಶ್ನೆ ಮಾಡಿದ್ದಾರೆ.
ಜನರಿಗೆ ಪ್ರಚೋದನೆ ಮಾಡುವಂತ ಕಾನೂನುಗಳನ್ನು ಯಾಕೆ ಜಾರಿಗೆ ತರಬೇಕು? ಕರ್ನಾಟಕದಲ್ಲಿ ಈಗ ಹಿಜಾಬ್ ಹಾಕ್ತಾ ಇದಾರಾ? ಮುಂಚೆ ಇಂದಲೂ ಇದ್ದ ಧಾರ್ಮಿಕ ಪದ್ಧತಿ ಇದು. ನಾವು ಹೊಸತಾಗಿ ಏನನ್ನೂ ಮಾಡಿಲ್ಲ ಎಂದಿದ್ದಾರೆ.
ಆಲ್ರೆಡಿ ಜನರ ಭಾಗವಾಗಿದ್ದ ಪದ್ಧತಿಯನ್ನು ಬಿಜೆಪಿ ತೆಗೆದಿತ್ತು. ನಾವೇನು ಜನಿವಾರ ಹಾಕಬೇಡಿ ಅಂದಿಲ್ಲ. ಎಲ್ಲರೂ ಜನರ ಬಗ್ಗೆ, ಅಭಿವೃದ್ಧಿ ಬಗ್ಗೆ ಗಮನ ಕೊಟ್ರೆ ಇಂಥ ವಿಷಯಗಳೆಲ್ಲ ದೊಡ್ಡದಾಗೋದಿಲ್ಲ ಎಂದಿದ್ದಾರೆ.



