May 15, 2026
Friday, May 15, 2026
spot_img

ಬಂಗಾಳದಲ್ಲಿ ಸಂಚಲನ ಮೂಡಿಸಿದ ‘ಯೋಗಿ’ ಮಾಡೆಲ್: ಬುಲ್ಡೋಜರ್ ಮೂಲಕ ಅಕ್ರಮ ಕಟ್ಟಡಗಳ ನೆಲೆಸಮ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಸಿಎಂ ಸುವೆಂದು ಅಧಿಕಾರಿ ಅವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಮಾದರಿಯಂತೆ ಅತಿಕ್ರಮ ಕಟ್ಟಡಗಳ ತೆರವಿಗೆ ಇಳಿದಿದ್ದಾರೆ.

ಬರೋಬ್ಬರಿ 24 ಬುಲ್ಡೋಜರ್ ಮೂಲಕ ಸಿಲಿಗುರಿ ಪ್ರದೇಶದಲ್ಲಿರುವ ಎಲ್ಲಾ ಅತಿಕ್ರಮ ಕಟ್ಟಡಗಳ ತೆರವಿಗೆ ಆದೇಶ ನೀಡಿದ್ದು, ಅಧಿಕಾರಿಗಳು ಅಕ್ರಮ ಕಟ್ಟಡಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮುಖ್ಯಮಂತ್ರಿಯಾಗಿ ಸುವೆಂದು ಅಧಿಕಾರಿ ಅಧಿಕಾರ ವಹಿಸಿದ ಬೆನ್ನಲ್ಲೇ ಬಂಗಾಳದಲ್ಲಿ ಮಹತ್ತರ ಬದಲಾವಣೆಗೆ ಮುಂದಾಗಿದ್ದಾರೆ. ಸಿಲುಗುರಿಯಲ್ಲಿ ಹೆಚ್ಚು ಕಟ್ಟಡಗಳು ಅತಿಕ್ರಮವಾಗಿ ನಿರ್ಮಾಣವಾಗಿದೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳು ನೊಟೀಸ್ ನೀಡಿ ಖಾಲಿ ಮಾಡಲು ಸೂಚಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಬಿಗಿ ಬಂದೋಬಸ್ತ್ ಮೂಲಕ ತೆರವು ಕಾರ್ಯಾಚರಣೆಗೆ ಸೂಚನೆ ನೀಡಲಾಗಿದ್ದು, ಇದಕ್ಕಾಗಿ 24 ಬುಲ್ಡೋಜರ್‌ಗಳನ್ನು ಉತ್ತರ ಪ್ರದೇಶದಿಂದ ತರಿಸಿಕೊಳ್ಳಲಾಗಿದೆ. ಈ ಬೆನ್ನಲ್ಲೇ ಅಧಿಕಾರಿಗಳು ಕಾರ್ಯಾಚರಣೆ ಶುರು ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !