ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಭೇಟಿ ನೀಡಿದ್ದಾರೆ. ಈ ವೇಳೆ ಉಭಯ ದೇಶಗಳು ಎಲ್‌ಪಿಜಿ, ರಕ್ಷಣಾ,ತೈಲ ನಿಕ್ಷೇಪ ಮತ್ತೆ ಅನಿಲ ಪೂರೈಕೆ ಮತ್ತು ಕಾರ್ಯತಂತ್ರದ ಒಪ್ಪಂದಗಳಿಗೆ ಸಹಿ ಹಾಕಿವೆ.
ಪ್ರಧಾನಿ ಮೋದಿ ಹಾಗು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ವ್ಯಾಪಾರ, ಹೂಡಿಕೆ, ಇಂಧನ ಭದ್ರತೆ ಜೊತೆಗೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದರು. ಈ ವೇಳೆ ಎಲ್‌ಪಿಜಿ ಮತ್ತು ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳ ಕ್ಷೇತ್ರಗಳಲ್ಲಿ ಎರಡು ಪ್ರಮುಖ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಭಾರತ ಮತ್ತು ಯುಎಇ ರಕ್ಷಣಾ ಪಾಲುದಾರಿಕೆಗಾಗಿ ಚೌಕಟ್ಟಿನ ಕುರಿತು ಒಪ್ಪಂದವನ್ನು ಘೋಷಿಸಿದರು. ಈ ಮೂಲಕ ರಕ್ಷಣಾ ತಂತ್ರಜ್ಞಾನಗಳ ಜಂಟಿ ಅಭಿವೃದ್ಧಿ ಮತ್ತು ಸಹ-ಉತ್ಪಾದನೆ, ಆಳವಾದ ಗುಪ್ತಚರ ಹಂಚಿಕೆ ಮತ್ತು ಕಠಿಣ ಭಯೋತ್ಪಾದನಾ ನಿಗ್ರಹ ಸಹಕಾರದ ಮೇಲೆ ಕೇಂದ್ರೀತವಾಗಿದೆ.
ಗುಜರಾತ್‌ನ ದ್ವಾರಕಾ ಜಿಲ್ಲೆಯ ವಡಿನಾರ್ ಪಟ್ಟಣದಲ್ಲಿ ಹಡಗು ದುರಸ್ತಿ ಕ್ಲಸ್ಟರ್ ನ್ನು ಸ್ಥಾಪಿಸುವ ಉಭಯ ದೇಶಗಳು ಸಹಿ ಹಾಕಿವೆ. ಇದು ಭಾರತದ ಕಡಲ ಮೂಲಸೌಕರ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಹಡಗುಗಳ ದುರಸ್ತಿಗಾಗಿ ಪ್ರಾದೇಶಿಕ ಕೇಂದ್ರವಾಗಿ ಅದರ ಸ್ಥಾನವನ್ನು ಬೆಂಬಲಿಸುವ ನಿರೀಕ್ಷೆಯ ಯೋಜನೆಯಾಗಿದೆ.
ಇಡತ ಜೊತೆಗೆ ಯುಎಇ 5 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಹೂಡಿಕೆಗಳನ್ನು ಘೋಷಿಸಿತು. ಇದು ಭಾರತೀಯ ಮೂಲಸೌಕರ್ಯ ಯೋಜನೆಗಳ ಹೆಚ್ಚಳ . ಆರ್‌ಬಿಎಲ್ ಬ್ಯಾಂಕ್‌ನಲ್ಲಿ ಸಾಲ ಸಾಮರ್ಥ್ಯವನ್ನು ವಿಸ್ತರಣೆ ಮತ್ತು ವಸತಿ ಹಣಕಾಸು ಸಂಸ್ಥೆ ಸಮ್ಮಾನ್ ಕ್ಯಾಪಿಟಲ್‌ಗೆ ದ್ರವ್ಯತೆಯನ್ನು ಸೇರಿಸುವ ಗುರಿಯನ್ನು ಹೊಂದಿದೆ.
ಪ್ರಧಾನಿ ಮೋದಿ ಮತ್ತು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಸಮ್ಮುಖದಲ್ಲಿ ಈ ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.



