May 16, 2026
Saturday, May 16, 2026
spot_img

ಗೆಲುವಿನ ಬೆನ್ನಲ್ಲೇ ಪಂತ್‌ಗೆ ಶಾಕ್! ಐಪಿಎಲ್‌ನಿಂದ ಬಿತ್ತು ಭಾರೀ ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಖನೌ ಸೂಪರ್ ಜೈಂಟ್ಸ್ ತಂಡ ಚೆನ್ನೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಖುಷಿಯಲ್ಲಿದ್ದಾಗಲೇ ನಾಯಕ ರಿಷಬ್ ಪಂತ್ ಅವರಿಗೆ ಐಪಿಎಲ್ ಆಡಳಿತ ಮಂಡಳಿ ದೊಡ್ಡ ಶಾಕ್ ನೀಡಿದೆ.

ನಿಧಾನಗತಿಯ ಓವರ್ ರೇಟ್ ಕಾರಣ ಪಂತ್ ಮೇಲೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ತಂಡ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸಲು ವಿಫಲವಾಗಿತ್ತು. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ಅಡಿಯಲ್ಲಿ ಕನಿಷ್ಠ ಓವರ್ ರೇಟ್ ಕಾಪಾಡದ ಕಾರಣ ಪಂತ್ ತಪ್ಪಿತಸ್ಥರೆಂದು ತೀರ್ಮಾನಿಸಲಾಗಿದೆ. ಈ ಸೀಸನ್‌ನಲ್ಲಿ ಲಖನೌ ತಂಡದಿಂದ ನಡೆದ ಮೊದಲ ತಪ್ಪಾಗಿರುವುದರಿಂದ ನಾಯಕನಿಗೆ ಮಾತ್ರ ದಂಡ ವಿಧಿಸಲಾಗಿದೆ.

ಇದನ್ನೂ ಓದಿ:

ಇದೇ ತಪ್ಪು ಮತ್ತೊಮ್ಮೆ ನಡೆದರೆ ಪಂತ್‌ಗೆ 24 ಲಕ್ಷ ರೂ. ದಂಡ ಹಾಗೂ ತಂಡದ ಆಟಗಾರರಿಗೂ ಪಂದ್ಯ ಶುಲ್ಕದ ಭಾಗ ಕಡಿತವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಕುತೂಹಲಕರ ಸಂಗತಿಯೆಂದರೆ, ಈ ಪಂದ್ಯದಲ್ಲಿ ಪಂತ್ ಬ್ಯಾಟಿಂಗ್‌ಗೆ ಬಂದಿರಲಿಲ್ಲ. ಈ ಸೀಸನ್‌ನಲ್ಲಿ ಮೊದಲ ಬಾರಿಗೆ ಅವರು ಬ್ಯಾಟಿಂಗ್ ಮಾಡದೇ ಉಳಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಪಂದ್ಯ ಬಳಿಕ ಮಾತನಾಡಿದ ಪಂತ್, ತಂಡದ ಸರಿಯಾದ ಆರಂಭಿಕ ಜೋಡಿಯನ್ನು ಹುಡುಕುವ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದ್ದು, ಅತಿಯಾದ ಪ್ರಯೋಗಗಳು ಕೆಲವೊಮ್ಮೆ ತಂಡದ ಮೇಲೆ ಪರಿಣಾಮ ಬೀರುತ್ತವೆ ಎಂದು ಅಭಿಪ್ರಾಯಪಟ್ಟರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !