May 16, 2026
Saturday, May 16, 2026
spot_img

ಅಕ್ರಮ ವಲಸಿಗರ ಪ್ರದೇಶಗಳನ್ನು ತೋರಿಸಲು ನಾನು ಸಿದ್ಧ: ಆರ್.ಅಶೋಕ್ ಸವಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಆರಂಭವಾಗಲಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಈ ಪ್ರಕ್ರಿಯೆ ನಕಲಿ ಮತದಾರರನ್ನು ಗುರುತಿಸಿ ತೆರವುಗೊಳಿಸುವ ಉದ್ದೇಶ ಹೊಂದಿದ್ದು, ದೇಶದ ಭದ್ರತೆಗೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿಗಳು ಇದ್ದಾರೆ. ಬೇಕಾದರೆ ಅವರು ವಾಸಿಸುತ್ತಿರುವ ಪ್ರದೇಶಗಳನ್ನು ತೋರಿಸಲು ನಾನು ಸಿದ್ಧ ಎಂದು ಸವಾಲು ಹಾಕಿದರು.

ಬೆಂಗಳೂರು ಪೊಲೀಸರು ಈಗಾಗಲೇ ಸುಮಾರು 250 ಅಕ್ರಮ ವಲಸಿಗರನ್ನು ಗುರುತಿಸಿ, ಅವರನ್ನು ಗಡಿಭಾಗಕ್ಕೆ ಕಳುಹಿಸಿರುವುದಾಗಿ ಅಶೋಕ್ ಹೇಳಿದರು. ಮಹದೇವಪುರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಟೆಂಟ್‌ಗಳಲ್ಲಿ ವಾಸಿಸುತ್ತಿರುವವರ ಬಗ್ಗೆ ಕೂಡ ಅವರು ಉಲ್ಲೇಖಿಸಿದರು.

ಇದನ್ನೂ ಓದಿ:

ಜೂನ್ 20ರಿಂದ ಆರಂಭವಾಗಲಿರುವ SIR ಪ್ರಕ್ರಿಯೆ ಮೂಲಕ ಮೃತ ಮತದಾರರು ಹಾಗೂ ವಿವಿಧ ರಾಜ್ಯಗಳಲ್ಲಿ ಹೆಸರು ಹೊಂದಿರುವವರನ್ನು ಪಟ್ಟಿಯಿಂದ ತೆಗೆದುಹಾಕಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲ ಭಾರತೀಯರಿಗೂ ಮತದಾನದ ಹಕ್ಕಿದೆ. ಆದರೆ ನಕಲಿ ಮತದಾರರನ್ನು ತಡೆಯುವುದು ದೇಶದ ಹಿತಾಸಕ್ತಿಗೆ ಅಗತ್ಯ ಎಂದು ಆರ್. ಅಶೋಕ್ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !