May 16, 2026
Saturday, May 16, 2026
spot_img

‘ಮಕ್ಳು ಮಾಡ್ಕೊಳಿ ಹಣ ಪಡ್ಕೊಳಿ’: ಜನಸಂಖ್ಯೆ ಹೆಚ್ಚಿಸಲು ನಾಯ್ಡು ಮಾಸ್ಟರ್‌ಪ್ಲಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದಲ್ಲಿ ಕುಸಿಯುತ್ತಿರುವ ಜನನ ಪ್ರಮಾಣ ಹೆಚ್ಚಿಸಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೊಸ ಯೋಜನೆ ಘೋಷಿಸಿದ್ದು, ಮೂರನೇ ಹಾಗೂ ನಾಲ್ಕನೇ ಮಗುವಿಗೆ ಸರ್ಕಾರದಿಂದ ಆರ್ಥಿಕ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಘೋಷಣೆ ರಾಜ್ಯ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟೆಯಲ್ಲಿ ನಡೆದ ‘ಸ್ವರ್ಣ ಆಂಧ್ರ, ಸ್ವಚ್ಛ ಆಂಧ್ರ’ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ನಾಯ್ಡು, ಮೂರನೇ ಮಗು ಜನಿಸಿದರೆ 30 ಸಾವಿರ ರೂ. ಹಾಗೂ ನಾಲ್ಕನೇ ಮಗು ಹುಟ್ಟಿದರೆ 40 ಸಾವಿರ ರೂ. ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದರು. ಜನಸಂಖ್ಯೆ ವೃದ್ಧಿಗೆ ಸಮಾಜ ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದೂ ಅವರು ಹೇಳಿದರು.

ಇದನ್ನೂ ಓದಿ:

ಇದಕ್ಕೂ ಮೊದಲು ಎರಡನೇ ಮಗುವಿಗೆ 25 ಸಾವಿರ ರೂ. ಪ್ರೋತ್ಸಾಹಧನ ಯೋಜನೆ ಜಾರಿಗೆ ತಂದಿದ್ದ ಸರ್ಕಾರ, ಈಗ ಅದನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಿದೆ. ಜನನ ಪ್ರಮಾಣದಲ್ಲಿ ನಿರಂತರ ಕುಸಿತ ಕಂಡುಬರುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಒಂದು ಮಗು ಸಾಕು ಎಂಬ ಮನೋಭಾವ, ತಡ ವಿವಾಹ ಹಾಗೂ ಆರೋಗ್ಯ ಸಮಸ್ಯೆಗಳ ಪರಿಣಾಮ ಜನಸಂಖ್ಯೆ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದು ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಮುಂದಿನ ತಿಂಗಳಲ್ಲಿ ಈ ಯೋಜನೆಯ ಸಂಪೂರ್ಣ ಮಾರ್ಗಸೂಚಿ ಪ್ರಕಟವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !