May 17, 2026
Sunday, May 17, 2026
spot_img

ನೆದರ್‌ಲ್ಯಾಂಡ್ಸ್‌ನಲ್ಲಿ ಉದ್ಯಮ ಶೃಂಗಸಭೆ: ಟಾಟಾ-ASML ನಡುವೆ ಐತಿಹಾಸಿಕ ಸೆಮಿಕಂಡಕ್ಟರ್ ಒಪ್ಪಂದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಉತ್ಪಾದನಾ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ದೊಡ್ಡ ಯಶಸ್ಸು ಸಿಕ್ಕಿದೆ. ನೆದರ್‌ಲ್ಯಾಂಡ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಡಚ್ ಪ್ರಧಾನಿ ರಾಬ್ ಜೆಟ್ಟನ್ ಅವರೊಂದಿಗೆ ಜಂಟಿಯಾಗಿ ಪ್ರಮುಖ ಡಚ್ ಕಂಪನಿಗಳ 16 ಸಿಇಒಗಳ ದುಂಡುಮೇಜಿನ ಸಭೆ ನಡೆಸಿದರು. ಈ ಸಭೆಯಲ್ಲಿ ಭಾರತದಲ್ಲಿ ಹೂಡಿಕೆ, ನಾವೀನ್ಯತೆ ಹಾಗೂ ಉದ್ಯಮ ವಿಸ್ತರಣೆಗೆ ಜಾಗತಿಕ ಉದ್ಯಮಿಗಳಿಗೆ ಪ್ರಧಾನಿ ಮುಕ್ತ ಆಹ್ವಾನ ನೀಡಿದರು.

ಈ ಉದ್ಯಮ ಶೃಂಗಸಭೆಗೂ ಮುನ್ನ ಭಾರತದ ಸೆಮಿಕಂಡಕ್ಟರ್ ವಲಯದಲ್ಲಿ ಅತ್ಯಂತ ಮಹತ್ವದ ಒಪ್ಪಂದವೊಂದು ಏರ್ಪಟ್ಟಿತು. ಜಾಗತಿಕ ಚಿಪ್ ತಯಾರಿಕಾ ಉಪಕರಣಗಳ ದೈತ್ಯ ಕಂಪನಿಯಾದ ASML ಮತ್ತು ಭಾರತದ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಗಳು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ.

ಪ್ರಮುಖ ಉದ್ದೇಶ: ಗುಜರಾತ್‌ನ ಧೋಲೇರಾದಲ್ಲಿ ತಲೆಯೆತ್ತಲಿರುವ ಭಾರತದ ಮೊದಲ ಅತ್ಯಾಧುನಿಕ ‘ಫ್ರಂಟ್-ಎಂಡ್ ಸೆಮಿಕಂಡಕ್ಟರ್ ಫ್ಯಾಬ್’ ನಿರ್ಮಾಣಕ್ಕೆ ಈ ಒಪ್ಪಂದವು ಪ್ರಮುಖ ತಾಂತ್ರಿಕ ಬೆಂಬಲ ನೀಡಲಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇಂದಿನ ಜಗತ್ತಿನಲ್ಲಿ ಭಾರತವು ಆರ್ಥಿಕ ಸ್ಥಿರತೆ ಮತ್ತು ಬೃಹತ್ ಮಾರುಕಟ್ಟೆಯ ಹೆಮ್ಮೆಯ ಸಂಕೇತವಾಗಿದೆ. ಮೂಲಸೌಕರ್ಯ, ಸ್ವಚ್ಛ ಇಂಧನ ಹಾಗೂ ಸಂಪರ್ಕ ಕ್ರಾಂತಿಯ ವೇಗದಲ್ಲಿ ಜಗತ್ತಿನ ಯಾವುದೇ ದೇಶವೂ ಭಾರತಕ್ಕೆ ಸಾಟಿಯಿಲ್ಲ. ಪ್ರಸ್ತುತ ಜಾಗತಿಕ ಆರ್ಥಿಕ ಬೆಳವಣಿಗೆಗೆ ಭಾರತವೊಂದೇ ಶೇಕಡಾ 17 ರಷ್ಟು ಕೊಡುಗೆ ನೀಡುತ್ತಿದೆ” ಎಂದು ಹೆಮ್ಮೆಯಿಂದ ತಿಳಿಸಿದರು.

ಭಾರತದ ಆರ್ಥಿಕತೆಯ ಡಿಎನ್‌ಎಯನ್ನು ನಿರಂತರ ಸುಧಾರಣೆಗಳ ಮೂಲಕ ಸಂಪೂರ್ಣವಾಗಿ ಬದಲಾಯಿಸಲಾಗಿದೆ ಎಂದು ಪ್ರಧಾನಿ ವಿವರಿಸಿದರು. ಹೂಡಿಕೆದಾರರಿಗೆ ಪೂರಕವಾದ ವಾತಾವರಣ ನಿರ್ಮಿಸಲು ಕೈಗೊಂಡಿರುವ ಕ್ರಮಗಳು ಇಲ್ಲಿವೆ:

ಖಾಸಗಿ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಲು ಬಾಹ್ಯಾಕಾಶ, ಗಣಿಗಾರಿಕೆ ಮತ್ತು ಪರಮಾಣು ಇಂಧನ ಕ್ಷೇತ್ರಗಳನ್ನು ಮುಕ್ತಗೊಳಿಸಲಾಗಿದೆ.

ಕಾರ್ಮಿಕ ಕಾಯ್ದೆ, ತೆರಿಗೆ ವ್ಯವಸ್ಥೆ ಹಾಗೂ ಸುಲಭ ವ್ಯಾಪಾರ ಪ್ರಕ್ರಿಯೆಗಳನ್ನು ಅತ್ಯಂತ ಸರಳಗೊಳಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !