November 9, 2026
Monday, November 9, 2026
spot_img

ಡಿಸೆಂಬರ್‌ನಲ್ಲಿ ತವರಿಗೆ ಮರಳುವ ತವಕ: ಹೊಸ ಪಾಸ್‌ಪೋರ್ಟ್‌ಗಾಗಿ ಶೇಖ್ ಹಸೀನಾ ಕಸರತ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ತಾಯ್ನಾಡಿಗೆ ಮರಳುವ ಪ್ರಯತ್ನಕ್ಕೆ ಹೊಸ ವೇಗ ಸಿಕ್ಕಿದೆ. ತಮ್ಮ ಬಾಂಗ್ಲಾದೇಶದ ಪಾಸ್‌ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿಯನ್ನು (ಎನ್‌ಐಡಿ) ಮರುಪಡೆಯಲು ಅವರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರಿಗೆ ಹೊಸ ಪ್ರಯಾಣ ದಾಖಲೆ ನೀಡುವ ಬದಲು ಅವರನ್ನು ಹಸ್ತಾಂತರಿಸಬೇಕು ಎಂದು ಬಾಂಗ್ಲಾದೇಶ ಸರ್ಕಾರ ಪಟ್ಟು ಹಿಡಿದಿದೆ.

ದೆಹಲಿಯ ರಾಯಭಾರ ಕಚೇರಿಗೆ ವಕೀಲರ ಪತ್ರ

ಲಂಡನ್‌ನ ಮ್ಯಾಟ್ರಿಕ್ಸ್ ಚೇಂಬರ್ಸ್‌ನಲ್ಲಿರುವ ಹಸೀನಾ ಅವರ ವಕೀಲರು ನವದೆಹಲಿಯ ಬಾಂಗ್ಲಾದೇಶ ರಾಯಭಾರ ಕಚೇರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ. ಮಧ್ಯಂತರ ಸರ್ಕಾರವು ಅವರ ಹಿಂದಿನ ಪಾಸ್‌ಪೋರ್ಟ್ ಮತ್ತು ಗುರುತಿನ ಚೀಟಿಯನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಪ್ರಜೆಯಾಗಿರುವ ಹಸೀನಾ ಅವರಿಗೆ ಹೊಸ ದಾಖಲೆಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ. ಅರ್ಜಿಯನ್ನು ಶೀಘ್ರವಾಗಿ ಪರಿಶೀಲಿಸುವಂತೆಯೂ ಕೋರಿದ್ದಾರೆ.

ಇದನ್ನೂ ಓದಿ:

2024ರ ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡು ಸರ್ಕಾರ ಪತನಗೊಂಡ ಬಳಿಕ ಹಸೀನಾ ಭಾರತಕ್ಕೆ ಬಂದಿದ್ದರು. ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳಿ ನ್ಯಾಯಾಲಯದ ಮುಂದೆ ಶರಣಾಗುವ ಉದ್ದೇಶವಿದೆ ಎಂದು ಅವರು ಈ ಹಿಂದೆ ಹೇಳಿದ್ದರು.

ಹಸ್ತಾಂತರವೇ ಸೂಕ್ತ ಎಂದ ಬಾಂಗ್ಲಾದೇಶ

ಬಾಂಗ್ಲಾದೇಶದ ವಿದೇಶಾಂಗ ಖಾತೆ ರಾಜ್ಯ ಸಚಿವ ಹುಮಾಯುನ್ ಕಬೀರ್, ಹಸೀನಾ ಅವರಿಗೆ ಹೊಸ ಪಾಸ್‌ಪೋರ್ಟ್ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶ ನಡುವೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಅಪರಾಧಿಗಳ ಹಸ್ತಾಂತರ ಒಪ್ಪಂದ ಜಾರಿಯಲ್ಲಿರುವುದರಿಂದ, ಕಾನೂನು ಪ್ರಕ್ರಿಯೆಯ ಮೂಲಕ ಅವರನ್ನು ಹಸ್ತಾಂತರಿಸಬೇಕು ಎಂಬುದು ಢಾಕಾದ ನಿಲುವಾಗಿದೆ.

Must Read

Skip to toolbar