July 18, 2026
Saturday, July 18, 2026
spot_img

ನಿರಾಶ್ರಿತರ ಕೇಂದ್ರದಿಂದ ನಾಲ್ವರು ವಿದೇಶಿ ಮಹಿಳೆಯರು ಕಿಟಕಿಯ ಗ್ರಿಲ್ ಮುರಿದು ಪರಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಗುಬ್ಬಿ ‘ಹೋಮ್ ಆಫ್ ಹೋಪ್’ ನಿರಾಶ್ರಿತ ಕೇಂದ್ರದಿಂದ ನಾಲ್ವರು ವಿದೇಶಿ ಮಹಿಳೆಯರು ಪರಾರಿ ಆಗಿದ್ದಾರೆ.

ಮೇ 11ರಂದು ಬೆಳಗ್ಗೆ ಸುಮಾರು 3 ಗಂಟೆ ಸುಮಾರಿಗೆ ಆಶ್ರಮದ ಎರಡನೇ ಅಂತಸ್ತಿನ ಕಿಟಕಿಯ ಗ್ರಿಲ್ ಮುರಿದು ಮಹಿಳೆಯರು ಪರಾರಿಯಾಗಿದ್ದಾರೆ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪರಾರಿಯಾದವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಈ ಮಹಿಳೆಯರನ್ನು ಉಗಾಂಡ ಹಾಗೂ ನೈಜೀರಿಯಾ ಮೂಲದವರು ಎಂದು ಗುರುತಿಸಲಾಗಿದೆ. ತೋಪಿಷ್ಟ, ನಗವ, ಸಫಿನಾ ಮತ್ತು ಪಿತೀನ ಎಂದು ಹೆಸರುಗಳಾಗಿದ್ದು, ವೀಸಾ ಅವಧಿ ಮುಗಿದ ಬಳಿಕವೂ ತಮ್ಮ ದೇಶಕ್ಕೆ ಮರಳದೇ ಭಾರತದಲ್ಲೇ ಅಕ್ರಮವಾಗಿ ಉಳಿದಿದ್ದರು.

ವೀಸಾ ನಿಯಮ ಉಲ್ಲಂಘನೆ ಹಿನ್ನೆಲೆ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದರು. ಬಳಿಕ ವಿದೇಶಿಗರ ನೋಂದಣಿ ಕಚೇರಿ ಅಧಿಕಾರಿಗಳು ‘ಹೋಮ್ ಆಫ್ ಹೋಪ್’ ನಿರಾಶ್ರಿತ ಆಶ್ರಮದಲ್ಲಿ ಇರಿಸಿದ್ದರು. ಆದರೆ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆಯೂ ಪರಾರಿಯಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !