May 18, 2026
Monday, May 18, 2026
spot_img

ತಿಲಕ್ ವರ್ಮ ಜೊತೆ ಡೇಟಿಂಗ್ ಗಾಸಿಪ್‌: ಶ್ರೀಲೀಲಾ ತಾಯಿ ಏನ್ ಹೇಳಿದ್ರು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಶ್ರೀಲೀಲಾ ಮತ್ತು ಕ್ರಿಕೆಟಿಗ ತಿಲಕ್ ವರ್ಮ ನಡುವಿನ ಡೇಟಿಂಗ್ ಗಾಸಿಪ್ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಎಲ್ಲಾ ವದಂತಿಗಳಿಗೆ ನಟಿಯ ತಾಯಿ ಡಾ. ಸ್ವರ್ಣಲತಾ ತೆರೆ ಎಳೆದಿದ್ದಾರೆ.

ದೇವಸ್ಥಾನ ಭೇಟಿಯೇ ಕಾರಣವಾ?

ವೈಕುಂಠ ಏಕಾದಶಿಯ ವೇಳೆ ಇಬ್ಬರೂ ಪ್ರತ್ಯೇಕವಾಗಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದ ಸಮಯದಲ್ಲಿ ಶ್ರೀಲೀಲಾ ತಾಯಿ ವಿಐಪಿ ಬಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದು ಗಾಸಿಪ್‌ಗೆ ಕಾರಣವಾಗಿತ್ತು. ಇದನ್ನೇ ಆಧಾರ ಮಾಡಿಕೊಂಡು ನೆಟ್ಟಿಗರು ಇವರಿಬ್ಬರ ನಡುವೆ ಪ್ರೀತಿಯ ಸಂಬಂಧ ಇದೆ ಎಂದು ಊಹಾಪೋಹ ಹರಡಿಸಿದ್ದರು.

ಇದನ್ನೂ ಓದಿ:

ಸಣ್ಣ ಘಟನೆಯೇ ದೊಡ್ಡ ಕಥೆಯಾಗಿದೆ

ಈ ಕುರಿತು ಪ್ರತಿಕ್ರಿಯಿಸಿದ ಡಾ. ಸ್ವರ್ಣಲತಾ, “ಇದು ಸಂಪೂರ್ಣ ಸುಳ್ಳು ಸುದ್ದಿ. ಶ್ರೀಲೀಲಾ ಮತ್ತು ತಿಲಕ್ ವರ್ಮ ಇದುವರೆಗೆ ಭೇಟಿಯಾಗಿಲ್ಲ, ಮಾತನಾಡಿಯೂ ಇಲ್ಲ. ಸಣ್ಣ ಘಟನೆಗಳನ್ನು ದೊಡ್ಡ ಕಥೆಯಾಗಿ ಮಾಡಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಶ್ರೀಲೀಲಾ ಸದ್ಯ ಸಿನಿಮಾಗಳು ಮತ್ತು ವಿದ್ಯಾಭ್ಯಾಸದ ಕಡೆ ಗಮನ ಹರಿಸಿದ್ದಾಳೆ ಎಂದು ಅವರು ತಿಳಿಸಿದ್ದಾರೆ. ಜೂನ್‌ನಲ್ಲಿ ನಡೆಯಲಿರುವ ನೀಟ್ ಪಿಜಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ನಟಿಗೆ ಈಗ ಓದು ಮತ್ತು ವೃತ್ತಿಜೀವನವೇ ಮುಖ್ಯ ಎಂದು ಹೇಳಿದ್ದಾರೆ. ಈ ಹಿಂದೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆಯೂ ಶ್ರೀಲೀಲಾ ಹೆಸರು ಕೇಳಿಬಂದಿದ್ದರೂ, ಬಳಿಕ ಆ ಗಾಸಿಪ್ ಸುಳ್ಳಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !