ಹೊಸದಿಗಂತ ಡಿಜಿಟಲ್ ಡೆಸ್ಕ್:
ತಂಜಾವೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಆಡಳಿತಾರೂಢ ಟಿವಿಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕ್ಷೇತ್ರಮಟ್ಟದಲ್ಲಿ ಕೆಲಸ ಮಾಡದೇ ಕೇವಲ ಸಾಮಾಜಿಕ ಜಾಲತಾಣಗಳ ಪ್ರಭಾವದ ಮೂಲಕವೇ ಟಿವಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದು ಅವರು ಆರೋಪಿಸಿದರು.
ಮತಗಟ್ಟೆಗಳಲ್ಲಿ ಏಜೆಂಟ್‌ಗಳೇ ಇರಲಿಲ್ಲ
ವಿಧಾನಸಭಾ ಚುನಾವಣೆಯ ಕುರಿತು ಮಾತನಾಡಿದ ಸ್ಟಾಲಿನ್, ಡಿಎಂಕೆ ಪಕ್ಷ ವರ್ಷಗಳಿಂದ ಜನರ ನಡುವೆ ಕೆಲಸ ಮಾಡುತ್ತಾ ಬಂದಿದ್ದರೂ, ಕೆಲವು ಪಕ್ಷಗಳು ಡಿಜಿಟಲ್ ಪ್ರಚಾರ ಮತ್ತು ಸೋಶಿಯಲ್ ಮೀಡಿಯಾ ತಂತ್ರಗಳನ್ನು ಬಳಸಿಕೊಂಡು ಮತದಾರರ ಮನಸ್ಸು ಗೆದ್ದಿವೆ ಎಂದು ಹೇಳಿದರು. ಮತಗಟ್ಟೆಗಳಲ್ಲಿ ಏಜೆಂಟ್‌ಗಳನ್ನೇ ಸರಿಯಾಗಿ ನೇಮಿಸದಿದ್ದರೂ ಜನರ ಮೇಲೆ ಪ್ರಭಾವ ಬೀರುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ:
ಮಕ್ಕಳ ಮೂಲಕ ಕುಟುಂಬದವರ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಸಾಮಾಜಿಕ ಮಾಧ್ಯಮ ಬಳಸಲಾಗಿತ್ತು. ಆ ಸಮಯದಲ್ಲಿ ಅದರ ಪರಿಣಾಮವನ್ನು ನಾವು ಅರ್ಥ ಮಾಡಿಕೊಳ್ಳಲಿಲ್ಲ. ಆದರೆ ಈಗ ಡಿಎಂಕೆ ಅದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಕೆಲಸ ಮಾಡುತ್ತೇವೆ ಎಂದು ಸ್ಟಾಲಿನ್ ಹೇಳಿದರು.
‘ಫೀನಿಕ್ಸ್’ ಹಕ್ಕಿಯಂತೆ ಮತ್ತೆ ಎದ್ದು ನಿಂತಿದೆ
1949ರಲ್ಲಿ ಸ್ಥಾಪನೆಯಾದ ಡಿಎಂಕೆ ಅನೇಕ ಗೆಲುವು-ಸೋಲುಗಳನ್ನು ಕಂಡಿದೆ. ಆದರೆ ಪ್ರತಿಯೊಂದು ಸಂಕಷ್ಟದ ಬಳಿಕ ‘ಫೀನಿಕ್ಸ್’ ಹಕ್ಕಿಯಂತೆ ಮತ್ತೆ ಎದ್ದು ನಿಂತಿದೆ ಎಂದು ಮಾಜಿ ಮುಖ್ಯಮಂತ್ರಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.



