ಹೊಸದಿಗಂತ ಡಿಜಿಟಲ್ ಡೆಸ್ಕ್:
ತೀವ್ರ ಬಿಸಿಲಿಗೆ ಬಳಲಿ ಬೆಂಡಾಗಿದ್ದ ಉದ್ಯಾನನಗರಿ ಬೆಂಗಳೂರು ಇದೀಗ ಮಳೆಗಾಲದಂತೆ ಕಾಣಿಸುತ್ತದೆ. ಬೆಂಗಳೂರಿನಲ್ಲಿ ನಿನ್ನೆ ಸಂಜೆ ಭಾರೀ ಮಳೆ ಬಿದ್ದಿದ್ದು, ರಸ್ತೆಗಳೆಲ್ಲ ವಾಟರ್ಪಾರ್ಕ್ನಂತೆ ಕಾಣಿಸುತ್ತಿದೆ.
ಬೆಂಗಳೂರಿನ ಮಳೆಗೆ ಭಾರೀ ಸಮಸ್ಯೆ ಎದುರಾಗಿದ್ದು, ಮನೆಗೆ ಮರಳುತ್ತಿದ್ದ ಜನರು ಮಳೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ರಸ್ತೆ ಬದಿಗಳಲ್ಲಿ ಗಾಡಿ ನಿಲ್ಲಿಸಿ, ಅಲ್ಲಲ್ಲಿ ಆಶ್ರಯ ಪಡೆದಿದ್ದಾರೆ. ಕೆ.ಆರ್. ಸರ್ಕಲ್ ಅಂಡರ್ಪಾಸ್ ಮಳೆಯಿಂದಾಗಿ ಮುಚ್ಚು ಭೀತಿ ಇರುವ ಕಾರಣ ಸದ್ಯಕ್ಕೆ ಬಂದ್ ಮಾಡಲಾಗಿದೆ. ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧ ಮಾಡಲಾಗಿದೆ.
ಇನ್ನೂ ಐದು ದಿನ ಬೆಂಗಳೂರಿನಲ್ಲಿ ಮಳೆಯ ವಾತಾವರಣವೇ ಇರಲಿದ್ದು, ಸಂಜೆ ಮಳೆಗೆ ಜನ ಹೈರಾಣಾಗಬಹುದು. ಮಳೆಗೆ ಸಿಲುಕದಂತೆ ಸಮಯ ಬದಲಾವಣೆ, ಮಳೆಗೆ ಸಿಕ್ಕಾಗ ರಕ್ಷಣೆಗೆ ರೈನ್ ಕೋಟ್ ಅಥವಾ ಚತ್ರಿಯನ್ನು ತೆಗೆದುಕೊಳ್ಳುವುದು ಉತ್ತಮವಾಗಿದೆ.



