May 19, 2026
Tuesday, May 19, 2026
spot_img

ಹಣ ಡ್ರಾ ಮಾಡೋಕೆ ಸಹಾಯ ಕೇಳಿದ್ದೇ ತಪ್ಪಾಯ್ತು, ಲಕ್ಷ ಲಕ್ಷ ಹಣ, ಚಿನ್ನ ಕಳೆದುಕೊಂಡ ಮಹಿಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಏನೂ ಗೊತ್ತಿಲ್ಲದ ಅಮಾಯಕರಿಗೆ ಸಹಾಯ ಮಾಡೋಕೆ ಬರುವ ಜನರು ಇದ್ದಾರೆ. ಆದರೆ ಅಂಥದ್ದೇ ಜನರ ಮುಗ್ಧತೆಯನ್ನು ತಮ್ಮ ಅಡ್ವಾಂಟೇಜ್‌ಗಾಗಿ ಬಳಸಿಕೊಳ್ಳುವ ಜನರೂ ಇದ್ದಾರೆ. ಬೆಂಗಳೂರಿನಲ್ಲಿ ಎಟಿಎಂನಲ್ಲಿ ಹಣ ಡ್ರಾ ಮಾಡೋಕೆ ಸಹಾಯ ಕೇಳಿದ ಮಹಿಳೆಗೆ ಮತ್ತೊಬ್ಬ ಮಹಿಳೆ ಮೋಸ ಮಾಡಿದ್ದಾರೆ.

ದಾಸನಪುರ ಬಳಿಯ ಲಕ್ಷ್ಮಿಪುರ ನಿವಾಸಿ ಲಲಿತಾ, ದಾಸನಪುರದ ಸಂಜೀವಿನಿ ಲೇಔಟ್‌ನ ಎಟಿಎಂ ಬಳಿಗೆ ಹೋಗಿದ್ದಾರೆ. ಆದರೆ ಅವರಿಗೆ ಹಣ ಡ್ರಾ ಮಾಡೋದು ಹೇಗೆ ಅನ್ನೋದು ಗೊತ್ತಾಗಿಲ್ಲ. ನಂತರ ಅಲ್ಲೇ ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಕರೆದು ಸಹಾಯ ಮಾಡುವಂತೆ ಕೇಳಿದ್ದಾರೆ.

ಸಹಾಯ ಮಾಡಿದ ಮಹಿಳೆ ಮನೆಯ ಹತ್ತಿರ

ಆಗ ಮಹಿಳೆ ಸಹಾಯಕ್ಕೆ ಬಂದು ಹತ್ತು ಸಾವಿರ ರೂಪಾಯಿ ಹಣ ಡ್ರಾ ಮಾಡಿ ಕೊಟ್ಟಿದ್ದಾರೆ. ಕಾರ್ಡ್‌ ಹಾಗೂ ಹಣ ಎರಡನ್ನೂ ಕೊಟ್ಟಿದ್ದಾರೆ. ಇದಾದ ನಂತರ ಲಲಿತಾ ಮನೆಯ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಶಾಪಿಂಗ್‌ ಮುಗಿದ ನಂತರ ದೊಡ್ಡ ಬೈರನಹಳ್ಳಿ ಬಳಿ ಆಟೋ ಇಳಿದು ಮನೆಯ ಹತ್ತಿರ ನಡೆದುಕೊಂಡು ಹೋಗಿದ್ದಾರೆ. ಈ ವೇಳೆ ಎಟಿಎಂನಲ್ಲಿ ಸಹಾಯ ಮಾಡಿದ ಮಹಿಳೆಯನ್ನು ತಮ್ಮ ಮನೆಯ ಬಳಿ ನೋಡಿದ್ದಾರೆ.

ಎಟಿಎಂ ಪಿನ್‌ ಬ್ಲಾಕ್‌

ಇಡೀ ದಿನ ಲಲಿತಾ ಅವರ ಆಕ್ಟಿವಿಟಿಗಳನ್ನು ಆಕೆ ಗಮನಿಸಿರಬಹುದು ಎನ್ನುವುದನ್ನು ಅರಿತು ಲಲಿತಾ ಶಾಕ್‌ ಆಗಿದ್ದಾರೆ. ಹತ್ತಿರ ಬಂದು ಮಾತನಾಡಿಸಿ ಏನನ್ನೋ ಕೇಳುವಂತೆ ಮಾಡಿ ಕೈಯಲ್ಲಿದ್ದ ಪರ್ಸ್‌ ಕಿತ್ತು ಓಡಿಹೋಗಿದ್ದಾರೆ. ಕಾರ್ಡ್‌ನಲ್ಲಿ ಎಟಿಎಂ ಕಾರ್ಡ್‌, ಆಧಾರ್‌ ಕಾರ್ಡ್‌ ಹಾಗೂ ಕ್ಯಾಶ್‌ ಇತ್ತು. ಸದ್ಯ ಎಟಿಎಂ ಪಿನ್‌ ಬ್ಲಾಕ್‌ ಮಾಡಲಾಗಿದೆ. ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !