May 19, 2026
Tuesday, May 19, 2026
spot_img

SKINCARE | ನ್ಯಾಚುರಲ್ ಡಿ-ಟ್ಯಾನ್, ಮುಖದ ಕಾಂತಿ ಹೆಚ್ಚಿಸಲು ಇಲ್ಲಿದೆ 5 ಸುಲಭ ಉಪಾಯಗಳು!

ಬೇಸಿಗೆಯ ಧಗಧಗಿಸುವ ಬಿಸಿಲು ಅಥವಾ ದೈನಂದಿನ ಪ್ರಯಾಣದಿಂದಾಗಿ ಚರ್ಮವು ಕಪ್ಪಾಗುವುದು ಅಂದರೆ ‘ಸನ್ ಟ್ಯಾನ್’ ಆಗುವುದು ಒಂದು ಸಾಮಾನ್ಯ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಮತ್ತು ರಾಸಾಯನಿಕಯುಕ್ತ ಕ್ರೀಮ್‌ಗಳನ್ನು ಬಳಸುವ ಬದಲು, ನಮ್ಮ ಅಡುಗೆಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥಗಳಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಕಡಲೆಹಿಟ್ಟು, ಮೊಸರು, ಟೊಮೆಟೊ ಮತ್ತು ಆಲೂಗಡ್ಡೆಯಂತಹ ನೈಸರ್ಗಿಕ ವಸ್ತುಗಳು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಚರ್ಮದ ಮೇಲಿನ ಕಪ್ಪುದನವನ್ನು ನಿವಾರಿಸಿ, ಮುಖದ ಕಾಂತಿಯನ್ನು ಮರಳಿ ತರಲು ಸಹಾಯ ಮಾಡುತ್ತವೆ. ಅತ್ಯಂತ ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಮನೆಯಲ್ಲಿಯೇ ಟ್ಯಾನ್ ರಿಮೂವ್ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ಮನೆಯಲ್ಲಿಯೇ ಟ್ಯಾನ್ ರಿಮೂವ್ ಮಾಡುವ ಸರಳ ಟಿಪ್ಸ್:

ಕಡಲೆಹಿಟ್ಟು ಮತ್ತು ಮೊಸರು ಪ್ಯಾಕ್
ಚಮಚ ಕಡಲೆಹಿಟ್ಟಿಗೆ 1 ಚಮಚ ಗಟ್ಟಿ ಮೊಸರು ಮತ್ತು ಸ್ವಲ್ಪ ಅರಿಶಿಣ ಹಾಕಿ ಮಿಶ್ರಣ ಮಾಡಿ. ಟ್ಯಾನ್ ಆಗಿರುವ ಜಾಗಕ್ಕೆ ಹಚ್ಚಿ, 20 ನಿಮಿಷ ಒಣಗಲು ಬಿಡಬೇಕು. ನಂತರ ಮುಖವನ್ನು ವೃತ್ತಾಕಾರವಾಗಿ ಮಸಾಜ್ ಮಾಡುತ್ತಾ ತಣ್ಣೀರಿನಿಂದ ತೊಳೆಯಬೇಕು. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಟ್ಯಾನ್ ಅನ್ನು ಬೇಗನೆ ಕಡಿಮೆ ಮಾಡುತ್ತದೆ.

ಟೊಮೆಟೊ ಮತ್ತು ನಿಂಬೆರಸ
ಚೆನ್ನಾಗಿ ಹಣ್ಣಾದ ಟೊಮೆಟೊ ರಸಕ್ಕೆ 1 ಚಮಚ ನಿಂಬೆರಸವನ್ನು ಸೇರಿಸಿ. ಹತ್ತಿ ಸಹಾಯದಿಂದ ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆಯಬೇಕು. ಟೊಮೆಟೊದಲ್ಲಿರುವ ಲೈಕೋಪೀನ್ ಮತ್ತು ನಿಂಬೆಹಣ್ಣಿನ ನೈಸರ್ಗಿಕ ಬ್ಲೀಚಿಂಗ್ ಗುಣ ತ್ವಚೆಯನ್ನು ಬಿಳಿಯಾಗಿಸುತ್ತದೆ.

ಆಲೂಗಡ್ಡೆ ರಸ
ಹಸಿ ಆಲೂಗಡ್ಡೆಯನ್ನು ತುರಿದು ಅದರ ರಸವನ್ನು ತೆಗೆದುಕೊಂಡು ನೇರವಾಗಿ ಟ್ಯಾನ್ ಆಗಿರುವ ಚರ್ಮದ ಮೇಲೆ ಹಚ್ಚಿ 10-15 ನಿಮಿಷ ಬಿಟ್ಟು ತೊಳೆಯಬೇಕು. ಆಲೂಗಡ್ಡೆ ರಸವು ಕಣ್ಣಿನ ಕೆಳಗಿನ ಕಪ್ಪು ವರ್ತುಲ ಹಾಗೂ ಸೂರ್ಯನ ಶಾಖದಿಂದ ಕಪ್ಪಾದ ಚರ್ಮಕ್ಕೆ ರಾಮಬಾಣವಾಗಿದೆ.

ಅಲೋವೆರಾ
ತಾಜಾ ಅಲೋವೆರಾ ಜೆಲ್ ಅನ್ನು ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿ ಮಸಾಜ್ ಮಾಡಕೊಂಡು ಇಡೀ ರಾತ್ರಿ ಹಾಗೇ ಬಿಟ್ಟು, ಮರುದಿನ ಬೆಳಿಗ್ಗೆ ತಣ್ಣೀರಿನಿಂದ ತೊಳೆಯಬೇಕು. ಇದು ಸನ್-ಬರ್ನ್ ಆಗಿರುವ ಚರ್ಮವನ್ನು ತಂಪಾಗಿಸುತ್ತದೆ ಮತ್ತು ಹಾನಿಗೊಳಗಾದ ಕೋಶಗಳನ್ನು ಸರಿಪಡಿಸುತ್ತದೆ.

ಕಾಫಿ ಪುಡಿ ಮತ್ತು ಜೇನುತುಪ್ಪ
ಚಮಚ ಕಾಫಿ ಪುಡಿಗೆ 1 ಚಮಚ ಜೇನುತುಪ್ಪ ಮಿಶ್ರಣ ಮಾಡಿ ಸ್ಕ್ರಬ್ ತಯಾರಿಸಿ. ಮುಖಕ್ಕೆ ಹಚ್ಚಿ 2-3 ನಿಮಿಷಗಳ ಕಾಲ ಹಗುರವಾಗಿ ಸ್ಕ್ರಬ್ ಮಾಡಿ, 10 ನಿಮಿಷದ ನಂತರ ತೊಳೆಯಬೇಕು. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !