May 19, 2026
Tuesday, May 19, 2026
spot_img

FOOD | ಕೇವಲ 10 ನಿಮಿಷದಲ್ಲೇ ಮಾಡುವ ಸೂಪರ್ ಟೇಸ್ಟಿ ಪುದೀನಾ ರೈಸ್ ಮಾಡುವ ಸರಳ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು:

ತಾಜಾ ಪುದೀನಾ ಎಲೆಗಳು
ಕೊತ್ತಂಬರಿ ಸೊಪ್ಪು
ಹಸಿರು ಮೆಣಸಿನಕಾಯಿ
ಶುಂಠಿ
ಬೆಳ್ಳುಳ್ಳಿ
ತೆಂಗಿನಕಾಯಿ
ಬೇಯಿಸಿದ ಅನ್ನ
ಈರುಳ್ಳಿ
ಸಾಸಿವೆ ಮತ್ತು ಜೀರಿಗೆ
ಗೋಡಂಬಿ ಅಥವಾ ಕಡಲೆಕಾಯಿ ಬೀಜ
ಪಲಾವ್ ಎಲೆ, ಚಕ್ಕೆ, ಲವಂಗ
ನಿಂಬೆಹಣ್ಣಿನ ರಸ
ಅಡುಗೆ ಎಣ್ಣೆ ಅಥವಾ ತುಪ್ಪ
ಉಪ್ಪು

ಮಾಡುವ ವಿಧಾನ
ಮೊದಲು ರುಬ್ಬಲು ಪುದೀನಾ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಮತ್ತು ತೆಂಗಿನಕಾಯಿಗೆ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಬೇಕು. ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಕಾಯಿಸಿ ಸಾಸಿವೆ, ಜೀರಿಗೆ, ಪಲಾವ್ ಎಲೆ, ಚಕ್ಕೆ, ಲವಂಗ ಮತ್ತು ಗೋಡಂಬಿ ಹಾಕಿ ಕೆಂಪಾಗುವವರೆಗೆ ಹುರಿಯಬೇಕು. ನಂತರ ಉದ್ದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಅದು ಹೊಂಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಬಾಡಿಸಿ. ರುಬ್ಬಿಟ್ಟುಕೊಂಡ ಪುದೀನಾ ಪೇಸ್ಟ್ ಅನ್ನು ಬಾಣಲೆಗೆ ಹಾಕಿ, ಹಸಿ ವಾಸನೆ ಹೋಗಿ ಎಣ್ಣೆ ಬಿಡುವವರೆಗೆ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಬೇಕು. ನಂತರ ಮಸಾಲೆ ಬೆಂದ ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೇಯಿಸಿದ ಅನ್ನವನ್ನು ಹಾಕಿ ಮೃದುವಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ನಿಂಬೆಹಣ್ಣಿನ ರಸ ಹಿಂಡಿ, ಮಿಕ್ಸ್ ಮಾಡಿ 2 ನಿಮಿಷ ಮುಚ್ಚಿಟ್ಟು ಒಲೆಯಿಂದ ಇಳಿಸಿದರೆ ರುಚಿಯಾದ ಪುದೀನಾ ರೈಸ್ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !