August 16, 2026
Sunday, August 16, 2026
spot_img

ಲಾಲ್‌ಬಾಗ್ ಫ್ಲವರ್ ಶೋಗೆ ಜನಸಾಗರ: 11 ದಿನದಲ್ಲಿ 9.5 ಲಕ್ಷಕ್ಕೂ ಅಧಿಕ ಮಂದಿ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆದ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ಭರ್ಜರಿ ಜನಸ್ಪಂದನೆ ವ್ಯಕ್ತವಾಗಿದೆ. ಬಣ್ಣಬಣ್ಣದ ಹೂವುಗಳ ಅಲಂಕಾರ ಹಾಗೂ ಗಾಜಿನ ಮನೆಯಲ್ಲಿ ನಿರ್ಮಿಸಲಾಗಿದ್ದ ಐತಿಹಾಸಿಕ ಕಲಾಕೃತಿಗಳು ಪ್ರವಾಸಿಗರು ಮತ್ತು ಸಾರ್ವಜನಿಕರನ್ನು ಸೆಳೆದಿವೆ.

ಒಂದೇ ದಿನ 2 ಲಕ್ಷಕ್ಕೂ ಅಧಿಕ ಮಂದಿ ಭೇಟಿ

ಕಳೆದ 11 ದಿನಗಳಲ್ಲಿ ಲಾಲ್‌ಬಾಗ್ ಫ್ಲವರ್ ಶೋಗೆ 9.5 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. ಸ್ವಾತಂತ್ರ್ಯ ದಿನದ ರಜೆಯಂದು ಮಾತ್ರ 2 ಲಕ್ಷಕ್ಕೂ ಅಧಿಕ ಜನರು ಪ್ರದರ್ಶನ ವೀಕ್ಷಿಸಿದ್ದಾರೆ.

ಒಂದೇ ದಿನ 1.05 ಕೋಟಿ ಆದಾಯ

ಪ್ರದರ್ಶನಕ್ಕೆ ಹರಿದುಬಂದ ಜನಸಾಗರದಿಂದ ಸ್ವಾತಂತ್ರ್ಯ ದಿನದಂದು 1.05 ಕೋಟಿ ಆದಾಯ ಸಂಗ್ರಹವಾಗಿದೆ. ಒಟ್ಟಾರೆ ಪ್ರದರ್ಶನದಿಂದ ಇದುವರೆಗೆ 3 ಕೋಟಿಗೂ ಅಧಿಕ ಆದಾಯ ಬಂದಿದೆ.

ಇದನ್ನೂ ಓದಿ:

ಗಾಜಿನ ಮನೆಯಲ್ಲಿ ಐತಿಹಾಸಿಕ ವೈಭವ

ಗಾಜಿನ ಮನೆಯಲ್ಲಿ ಹೂವುಗಳಿಂದ ರೂಪಿಸಲಾಗಿದ್ದ ವಿಶೇಷ ವಿನ್ಯಾಸಗಳು ಹಾಗೂ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ಅಲಂಕಾರಗಳು ಪ್ರಮುಖ ಆಕರ್ಷಣೆಯಾಗಿದ್ದವು. ಕುಟುಂಬ ಸಮೇತರಾಗಿ ಆಗಮಿಸಿದ ಜನರು ಹೂವಿನ ಲೋಕವನ್ನು ಕಣ್ತುಂಬಿಕೊಂಡರು.

ಪುಟ್ಟ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ವಿವಿಧ ವಯೋಮಾನದವರು ಪ್ರದರ್ಶನದಲ್ಲಿ ಸಂಭ್ರಮಿಸಿದರು. ಪ್ರಕೃತಿ ಸೌಂದರ್ಯ ಮತ್ತು ಇತಿಹಾಸದ ಕಲಾತ್ಮಕ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.

ನಾಳೆ ಫಲಪುಷ್ಪ ಪ್ರದರ್ಶನಕ್ಕೆ ತೆರೆ

ಭಾನುವಾರವೂ ಲಾಲ್‌ಬಾಗ್‌ನಲ್ಲಿ ಭಾರಿ ಜನಜಂಗುಳಿ ಕಂಡುಬಂದಿದ್ದು, ಬೆಂಗಳೂರಿನ ಪ್ರಮುಖ ಆಕರ್ಷಣೆಯಾಗಿ ಈ ಬಾರಿಯ ಫ್ಲವರ್ ಶೋ ಗಮನ ಸೆಳೆದಿದೆ. 11 ದಿನಗಳ ಕಾಲ ನಡೆದ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆ ಬೀಳಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !