May 20, 2026
Wednesday, May 20, 2026
spot_img

SNACKS | ಓವನ್ ಬೇಡ, ಮೈದಾ ಬೇಡ: ಕೇವಲ 5 ನಿಮಿಷದಲ್ಲಿ ಮಾಡಿ ಗರಿಗರಿಯಾದ ಬ್ರೆಡ್ ಪಿಜ್ಜಾ

ಪಿಜ್ಜಾ ಎಂದರೆ ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಬಾಯಲ್ಲಿ ನೀರೂರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಪಿಜ್ಜಾ ದುಬಾರಿ ಹಾಗೂ ಆರೋಗ್ಯಕ್ಕೆ ಅಷ್ಟೊಂದು ಹಿತವಲ್ಲ. ಇದಕ್ಕೆ ಸುಲಭವಾದ ಪರ್ಯಾಯವೇ ಎಂದರೆ ‘ಇನ್‌ಸ್ಟಂಟ್ ಬ್ರೆಡ್ ಪಿಜ್ಜಾ’. ಯಾವುದೇ ಓವನ್ ಅಥವಾ ಪಿಜ್ಜಾ ಬೇಸ್ ಇಲ್ಲದೆ, ಕೇವಲ ಮನೆಯಲ್ಲಿರುವ ಬ್ರೆಡ್, ತರಕಾರಿ ಮತ್ತು ಚೀಸ್ ಬಳಸಿ ಸಾಮಾನ್ಯ ತವಾ ಮೇಲೆಯೇ ಇದನ್ನು ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು:
ಬ್ರೆಡ್ ಸ್ಲೈಸ್
ಪಿಜ್ಜಾ ಸಾಸ್ ಅಥವಾ ಟೊಮೆಟೊ ಕೆಚಪ್
ಮೊಝರೆಲ್ಲಾ ಚೀಸ್
ನೀರುಳ್ಳಿ
ಟೊಮೆಟೊ
ಕ್ಯಾಪ್ಸಿಕಂ
ಸ್ವೀಟ್ ಕಾರ್ನ್
ಚಿಲ್ಲಿ ಫ್ಲೇಕ್ಸ್
ಆರಿಗ್ಯಾನೋ
ಬೆಣ್ಣೆ

ಮಾಡುವ ವಿಧಾನ
ಮೊದಲು ಬ್ರೆಡ್ ಸ್ಲೈಸ್‌ಗಳ ಒಂದು ಬದಿಗೆ ಸ್ವಲ್ಪ ಬೆಣ್ಣೆ ಸವರಿ, ತವಾ ಮೇಲೆ ಹಗುರವಾಗಿ ಟೋಸ್ಟ್ ಮಾಡಬೇಕು. ನಂತರ ಟೋಸ್ಟ್ ಮಾಡಿದ ಬದಿಗೆ 1 ಚಮಚ ಪಿಜ್ಜಾ ಸಾಸ್ ಅಥವಾ ಟೊಮೆಟೊ ಕೆಚಪ್ ಅನ್ನು ಸಮನಾಗಿ ಹರಡಿಕೊಂಡು. ನಂತರ ಇದರ ಮೇಲೆ ಸ್ವಲ್ಪ ತುರಿದ ಚೀಸ್ ಹಾಕಿ, ನಂತರ ಕತ್ತರಿಸಿದ ನೀರುಳ್ಳಿ, ಕ್ಯಾಪ್ಸಿಕಂ, ಟೊಮೆಟೊ ಮತ್ತು ಸ್ವೀಟ್ ಕಾರ್ನ್ ಅನ್ನು ಜೋಡಿಸಬೇಕು. ಬಳಿಕ ಮತ್ತೊಮ್ಮೆ ಮೇಲಿಂದ ಸ್ವಲ್ಪ ಚೀಸ್, ಚಿಲ್ಲಿ ಫ್ಲೇಕ್ಸ್ ಮತ್ತು ಆರಿಗ್ಯಾನೋವನ್ನು ಉದುರಿಸಿ. ತವಾಕ್ಕೆ ಸ್ವಲ್ಪ ಬೆಣ್ಣೆ ಸವರಿ, ಸಿದ್ಧಪಡಿಸಿದ ಬ್ರೆಡ್ ಇಟ್ಟು, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 3-4 ನಿಮಿಷ ಅಥವಾ ಚೀಸ್ ಪೂರ್ತಿಯಾಗಿ ಕರಗುವವರೆಗೆ ಬೇಯಿಸಿದರೆ ಗರಿಗರಿಯಾದ ಬ್ರೆಡ್ ಪಿಜ್ಜಾ ಸವಿಯಲು ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !