ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮಹಿಳೆಯೊಬ್ಬರು ಜೀವಂತ ಸಮಾಧಿಯಾಗಿದ್ದಾರೆ.
ನಿಡಗುಂದಿ ಪಟ್ಟಣದ ಗೌರೀಶ್ವರ ದೇವಸ್ಥಾನದ ಬಳಿಯಿರುವ ಮನೆಯಲ್ಲಿ ವಾಸವಾಗಿದ್ದ ಮಹಾದೇವಿ ವಾರದ ಮೃತರು. ಮೊನ್ನೆಯಷ್ಟೇ ಸುರಿದ ಮಳೆಗೆ ಹಳೆಯ ಬಿಲ್ಡಿಂಗ್ ತೋಯ್ದು ತೊಪ್ಪೆಯಾಗಿತ್ತು.
ಬೆಳಗಿನ ಜಾವ ಮಹಾದೇವಿ ಮಲಗಿದ್ದ ವೇಳೆ ಏಕಾಏಕಿ ಕಟ್ಟಡದ ಛಾವಣಿ ಕುಸಿದು ಬಿದ್ದಿದೆ. ಇದರಿಂದಾಗಿ ಅವರು ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾರೆ. ಸೆಖೆ ಇದ್ದ ಕಾರಣ ಮಹಾದೇವಿ ಪತಿ ಶಿವಾನಂದ ಮನೆಯ ಹೊರಗೆ ಮಲಗಿದ್ದರು. ಇದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.



