October 10, 2026
Saturday, October 10, 2026
spot_img

ಅಜ್ಜ-ಅಜ್ಜಿ ಜೊತೆ ಮಕ್ಕಳನ್ನು ಕಳಿಸುವ ಮುನ್ನ ಈ ವಿಡಿಯೋ ನೋಡಿ, ಕಂದಮ್ಮನ ಕಿಡ್ನಾಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಜ್ಜ ಅಜ್ಜಿ ಜೊತೆ ಮಕ್ಕಳು ಹೊರಗೆ ಹೋಗೋದು ಮಾಮೂಲಿ. ಆದರೆ ವಯಸ್ಸಾದವರನ್ನೇ ಟಾರ್ಗೆಟ್‌ ಮಾಡುವ ಕಳ್ಳರು ಮಕ್ಕಳನ್ನು ಕಿಡ್ನಾಪ್‌ ಮಾಡ್ತಾರೆ!

ಹೌದು, ಪಂಜಾಬ್‌ನ ಮೊಹಾಲಿ ಜಿಲ್ಲೆಯ ಕುರಾಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ನಾಲ್ಕೂವರೆ ವರ್ಷದ ಮಗುವನ್ನು ಹಾಡಹಗಲೇ ಅಜ್ಜಿ ತಾತನ ಗಾಡಿಯಿಂದ ಕಳ್ಳರು ಎಗರಿಸಿಕೊಂಡು ಹೋಗಿದ್ದಾರೆ.

ಅಜ್ಜಿ ತಾತನ ಜೊತೆ ಬೈಕ್‌ನಲ್ಲಿ ಇನ್ನೇನು ಮನೆಯ ಹತ್ತಿರ ಬಂದಾಗ ಅಜ್ಜಿ ಬೈಕ್‌ನಿಂದ ಇಳಿದು ಮನೆಯ ಗೇಟ್‌ ತೆಗೆಯಲು ಮುಂದಾಗಿದ್ದಾರೆ. ಆಗ ಬೈಕ್‌ನಲ್ಲಿ ಬಂದ ಮಕ್ಕಳ ಕಳ್ಳರು, ಮಗುವನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಕಾರ್‌ಗೆ ನೂಕಿದ್ದಾರೆ. ವೃದ್ಧ ದಂಪತಿ ಗಾಬರಿಯಾಗಿದ್ದು, ಶಕ್ತಿ ಮೀರಿ ಪ್ರಯತ್ನ ಮಾಡಿದ್ದಾರೆ. ಆದರೆ ಕಾರಿನಲ್ಲಿದ್ದ ಖದೀಮರು ಅಜ್ಜ ಅಜ್ಜಿ ಮೇಲೆಯೇ ಕಾರು ಓಡಿಸಲು ಮುಂದಾಗಿದ್ದಾರೆ.

ಸದ್ಯ ಮಗು ಕಿಡ್ನಾಪ್‌ ಆಗಿದ್ದು, ಇಡೀ ಊರಿನಲ್ಲಿ ಭಯದ ವಾತಾವರಣ ಎದುರಾಗಿದೆ. ಪೋಷಕರು ಸ್ವಂತ ಅಜ್ಜ ಅಜ್ಜಿ ಜೊತೆ ಕಳಿಸೋದಕ್ಕೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಗುವನ್ನು ಹುಡುಕಲು ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ.

Must Read