May 21, 2026
Thursday, May 21, 2026
spot_img

EYE CARE | ಕನ್ನಡಕ ಬಿಟ್ಟು ಲೆನ್ಸ್ ಬಳಸುತ್ತಿದ್ದೀರಾ? ಕಣ್ಣಿನ ಸುರಕ್ಷತೆಗಾಗಿ ಈ ನಿಯಮಗಳನ್ನು ಮರೆಯಬೇಡಿ

ಇತ್ತೀಚಿನ ದಿನಗಳಲ್ಲಿ ಕಾಂಟ್ಯಾಕ್ಟ್ ಲೆನ್ಸ್‌ಗಳು ಕೇವಲ ದೃಷ್ಟಿ ದೋಷ ನಿವಾರಣೆಗೆ ಮಾತ್ರವಲ್ಲದೆ, ಫ್ಯಾಷನ್ ಮತ್ತು ಸೌಂದರ್ಯ ವರ್ಧನೆಗೂ ಪ್ರಮುಖ ಕಾರಣವಾಗಿವೆ. ಆದರೆ ಕಣ್ಣಿನ ಕಪ್ಪುಗುಡ್ಡೆಯ ಮೇಲೆ ನೇರವಾಗಿ ಕೂರುವ ಈ ಲೆನ್ಸ್‌ಗಳ ಬಳಕೆಯಲ್ಲಿ ಸಣ್ಣ ನಿರ್ಲಕ್ಷ್ಯ ವಹಿಸಿದರೂ ಕಣ್ಣಿನ ಸೋಂಕಿನಂತಹ ಗಂಭೀರ ಸಮಸ್ಯೆಗಳು ಎದುರಾಗಬಹುದು. ಹಾಗಾದರೆ ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಮುನ್ನ ಅನುಸರಿಸಬೇಕಾದ ಕೆಲವು ನಿಯಮಗಳ ಬಗ್ಗೆ ತಿಳಿಯೋಣ.

ಕಾಂಟ್ಯಾಕ್ಟ್ ಲೆನ್ಸ್ ಬಳಸುವ ಮುನ್ನ ಅನುಸರಿಸಲೇಬೇಕಾದ ಕೆಲವು ಟಿಪ್ಸ್..

ಲೆನ್ಸ್ ಮುಟ್ಟುವ ಮುನ್ನ ಕೈಗಳನ್ನು ಸಾಬೂನಿನಿಂದ ತೊಳೆದು, ಲಿಂಟ್-ಫ್ರೀ ಟವೆಲ್‌ನಿಂದ ಸಂಪೂರ್ಣವಾಗಿ ಒಣಗಿಸಿಕೊಳ್ಳಬೇಕು.

ಲೆನ್ಸ್‌ಗಳನ್ನು ಸ್ವಚ್ಛಗೊಳಿಸಲು ಎಂದಿಗೂ ನಲ್ಲಿ ನೀರು ಬಳಸಬಾರದು. ಅದಕ್ಕಾಗಿ ವೈದ್ಯರು ನೀಡುವ ‘ಲೆನ್ಸ್ ಸಲ್ಯೂಷನ್’ ಮಾತ್ರ ಬಳಸಬೇಕು.

ಯಾವುದೇ ಕಾರಣಕ್ಕೂ ರಾತ್ರಿ ಕಾಂಟ್ಯಾಕ್ಟ್ ಲೆನ್ಸ್ ಧರಿಸಿ ಮಲಗಬಾರದು. ಇದು ಕಣ್ಣಿಗೆ ಹೋಗುವ ಆಮ್ಲಜನಕವನ್ನು ತಡೆದು ದೊಡ್ಡ ಇನ್ಫೆಕ್ಷನ್ ಉಂಟುಮಾಡಬಹುದು.

ದಿನಕ್ಕೆ ಗರಿಷ್ಠ 8 ಗಂಟೆಗಳ ಕಾಲ ಮಾತ್ರ ಲೆನ್ಸ್ ಧರಿಸುವುದು ಸುರಕ್ಷಿತ. ಜೊತೆಗೆ ಲೆನ್ಸ್ ಪ್ಯಾಕ್ ಮೇಲೆ ನೀಡಲಾದ ಎಕ್ಸ್‌ಪೈರಿ ದಿನಾಂಕದ ನಂತರ ಅದನ್ನು ಬಳಸಬಾರದು.

ಈಜುಕೊಳಕ್ಕೆ ಇಳಿಯುವಾಗ ಅಥವಾ ತಲೆಗೆ ಸ್ನಾನ ಮಾಡುವಾಗ ಕಡ್ಡಾಯವಾಗಿ ಲೆನ್ಸ್ ತೆಗೆದಿಡಬೇಕು. ಏಕೆಂದರೆ ನೀರಿನಲ್ಲಿರುವ ಸೂಕ್ಷ್ಮಾಣುಜೀವಿಗಳು ಲೆನ್ಸ್‌ನಲ್ಲಿ ಸಿಲುಕಿಕೊಂಡು ಕಣ್ಣಿಗೆ ಅಪಾಯ ಉಂಟಾಗಬಹುದು.

ಲೆನ್ಸ್ ಇಡುವ ಡಬ್ಬಿಯನ್ನು (Lens Case) ನಿಯಮಿತವಾಗಿ ಸಲ್ಯೂಷನ್‌ನಿಂದ ತೊಳೆದು ಒಣಗಿಸಬೇಕು ಪ್ರತಿ 3 ತಿಂಗಳಿಗೊಮ್ಮೆ ಹೊಸ ಕೇಸ್ ಬಳಸಬೇಕು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !