ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿರಂತರ ಏರುಪೇರು ಮುಂದುವರಿದಿದೆ. ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದಾಗಿ ಕಳೆದ ನಾಲ್ಕು ದಿನಗಳಲ್ಲಿ ಭರ್ಜರಿ 340 ರೂಪಾಯಿಗಳಷ್ಟು ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ, ಇಂದು ಸಹ ಕೊಂಚ ಏರಿಕೆ ಕಂಡುಬಂದಿದೆ. ಸದ್ಯ ಪ್ರತಿ ಗ್ರಾಂ ಚಿನ್ನಕ್ಕೆ 40 ರೂಪಾಯಿ ಹೆಚ್ಚಳವಾಗಿದ್ದು, ಜಾಗತಿಕ ಮಟ್ಟದಲ್ಲೂ ಅಲ್ಪಸ್ವಲ್ಪ ವ್ಯತ್ಯಾಸಗಳು ದಾಖಲಾಗಿವೆ. ಆದರೆ, ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಪ್ರಮುಖ ಬದಲಾವಣೆ ಕಾಣದೆ ಸ್ಥಿರತೆ ಕಾಯ್ದುಕೊಂಡಿದೆ.
ಇಂದಿನ ಚಿನ್ನದ ದರಗಳು (10 ಗ್ರಾಂ):
ದೇಶದಲ್ಲಿ ಸದ್ಯ ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,46,200 ರೂಪಾಯಿ ತಲುಪಿದೆ. ಇನ್ನು ಅತ್ಯಂತ ಶುದ್ಧವಾದ 24 ಕ್ಯಾರೆಟ್‌ನ (ಅಪರಂಜಿ) 10 ಗ್ರಾಂ ಬಂಗಾರದ ಬೆಲೆ 1,59,490 ರೂಪಾಯಿ ಆಗಿದೆ.
ಬೆಳ್ಳಿ ಬೆಲೆ ವಿವರ:
ಬೆಳ್ಳಿ ಪ್ರಿಯರಿಗೆ ಇಂದು ಬೆಲೆಯಲ್ಲಿ ಯಾವುದೇ ಶಾಕ್ ಸಿಕ್ಕಿಲ್ಲ. ದೇಶಾದ್ಯಂತ ಇಂದು 100 ಗ್ರಾಂ ಬೆಳ್ಳಿಯ ಬೆಲೆ 28,500 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು 10 ಗ್ರಾಂನ 22 ಕ್ಯಾರೆಟ್ ಚಿನ್ನದ ದರ 1,46,200 ರೂಪಾಯಿ ಇದ್ದರೆ, 100 ಗ್ರಾಂ ಬೆಳ್ಳಿ ಬೆಲೆ 28,500 ರೂಪಾಯಿ ಇದೆ. ಇನ್ನು ನೆರೆರಾಜ್ಯಗಳಾದ ತಮಿಳುನಾಡು ಮತ್ತು ಕೇರಳದ ಕೆಲವೆಡೆ 100 ಗ್ರಾಂ ಬೆಳ್ಳಿಯ ದರ ಸ್ವಲ್ಪ ಹೆಚ್ಚಾಗಿದ್ದು, 29,500 ರೂಪಾಯಿ ಆಸುಪಾಸಿನಲ್ಲಿದೆ.



