May 22, 2026
Friday, May 22, 2026
spot_img

ದೀರ್ಘಕಾಲದ ಪ್ರೀತಿಗೆ ಮದುವೆಯ ಮುದ್ರೆ! ತೇಜಸ್ವಿ ಪ್ರಕಾಶ್‌-ಕರಣ್‌ ಕುಂದ್ರಾ ಎಂಗೇಜ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ಸದಾ ಸುದ್ದಿಯಲ್ಲಿರುವ ಜೋಡಿಗಳಲ್ಲೊಂದಾದ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಕೊನೆಗೂ ತಮ್ಮ ಜೀವನದ ಮುಂದಿನ ಮಹತ್ವದ ಹಂತಕ್ಕೆ ಕಾಲಿಟ್ಟಿದ್ದಾರೆ. ನಟ ಕರಣ್ ಕುಂದ್ರಾ, ತೇಜಸ್ವಿ ಪ್ರಕಾಶ್‌ಗೆ ‘ಡೇಸಿ ಬ್ಲಿಂಗ್’ ಶೈಲಿಯಲ್ಲಿ ಅತ್ಯಂತ ರೋಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ್ದು, ಇಬ್ಬರ ನಿಶ್ಚಿತಾರ್ಥ ಅಧಿಕೃತವಾಗಿ ನೆರವೇರಿದೆ. ನಟಿ ತೇಜಸ್ವಿ ಪ್ರಕಾಶ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಿನುಗುವ ನಿಶ್ಚಿತಾರ್ಥದ ವಜ್ರದ ಉಂಗುರವನ್ನು ಪ್ರದರ್ಶಿಸುವ ಮೂಲಕ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಎಲ್ಲರ ಗಮನ ಸೆಳೆದ ವಜ್ರದ ಉಂಗುರ!
ತೇಜಸ್ವಿ ಪ್ರಕಾಶ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ, ಅವರ ಕೈಬೆರಳಿನಲ್ಲಿರುವ ವಜ್ರದ ಉಂಗುರವು ಎಲ್ಲರ ಗಮನ ಸೆಳೆಯುತ್ತಿದೆ. ಬಿಗ್ ಬಾಸ್ ದಿನಗಳಿಂದಲೂ ಪ್ರೀತಿಯಲ್ಲಿದ್ದ ಈ ಜೋಡಿ, ಪ್ರಪೋಸಲ್ ಮತ್ತು ನಿಶ್ಚಿತಾರ್ಥದ ಕ್ಷಣಗಳನ್ನು ಅತ್ಯಂತ ಖಾಸಗಿಯಾಗಿ ಆಚರಿಸಿಕೊಂಡಿದ್ದಾರೆ. ತೇಜಸ್ವಿ ತಮ್ಮ ಉಂಗುರವನ್ನು ತೋರಿಸುತ್ತಾ ನೀಡಿರುವ ಪೋಸ್ ನೆಟ್ಟಿಗರ ಮನ ಗೆದ್ದಿದೆ.

ಬಿಗ್ ಬಾಸ್‌ನಿಂದ ಶುರುವಾಗಿದ್ದ ಪ್ರೇಮಕಥೆ
ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಪ್ರೇಮಾಯಣ ‘ಬಿಗ್ ಬಾಸ್ ಸೀಸನ್ 15’ ರ ರಿಯಾಲಿಟಿ ಶೋನಿಂದ ಆರಂಭವಾಗಿತ್ತು. ಶೋ ಮುಗಿದ ನಂತರವೂ ಇವರಿಬ್ಬರು ಸದಾ ಒಟ್ಟಿಗೆ ಕಾಣಿಸಿಕೊಳ್ಳುತ್ತಾ, ಕಿರುತೆರೆಯ ಬೆಸ್ಟ್ ಕಪಲ್ ಎಂದು ಕರೆಸಿಕೊಂಡಿದ್ದರು. ಇವರಿಬ್ಬರ ಮದುವೆ ಯಾವಾಗ ಎಂಬ ಪ್ರಶ್ನೆಗೆ ಈಗ ನಿಶ್ಚಿತಾರ್ಥದ ಮೂಲಕ ಅಧಿಕೃತವಾಗಿ ಉತ್ತರ ಸಿಕ್ಕಂತಾಗಿದೆ. ಸದ್ಯ ಈ ತಾರಾ ಜೋಡಿಗೆ ಬಾಲಿವುಡ್ ಹಾಗೂ ಕಿರುತೆರೆಯ ಗಣ್ಯರು ಮತ್ತು ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆ ಹರಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !