October 16, 2026
Friday, October 16, 2026
spot_img

ಸಿಲಿಕಾನ್ ಸಿಟಿಯಲ್ಲಿ 90ರ ಗಡಿ ತಲುಪಿದ ಸಿಎನ್‌ಜಿ: ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿದ ತೈಲ ಕಂಪನಿಗಳು!

ಹೊಸದಿಗಂತ ಡಿಜಿಟೆಲ್‌ ಡೆಸ್ಕ್:

ಮಧ್ಯಮ ವರ್ಗದ ಜನರಿಗೆ ಇಂಧನ ಬೆಲೆ ಏರಿಕೆಯ ಹೊರೆ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳ ಸರಣಿ ಹೆಚ್ಚಳದ ಬೆನ್ನಲ್ಲೇ, ಈಗ ಬೆಂಗಳೂರಿನಲ್ಲಿ ಸಿಎನ್‌ಜಿ (CNG) ದರವೂ ಪ್ರತಿ ಕೆಜಿಗೆ 2 ರೂ.ಗಳಷ್ಟು ದುಬಾರಿಯಾಗಿದೆ.

ಜಾಗತಿಕ ಇಂಧನ ಬಿಕ್ಕಟ್ಟು ಹಾಗೂ ಪೂರೈಕೆ ವೆಚ್ಚ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಈ ಪರಿಷ್ಕರಣೆ ಮಾಡಿದ್ದು, ಬೆಂಗಳೂರಿನಲ್ಲಿ ಇಂದಿನ ಸಿಎನ್‌ಜಿ ರೇಟ್ 90 ರೂ.ಗೆ ಬಂದು ನಿಂತಿದೆ. ಮಾಲಿನ್ಯ ಮುಕ್ತ ಹಾಗೂ ಕಡಿಮೆ ವೆಚ್ಚದ ಪ್ರಯಾಣಕ್ಕಾಗಿ ಸಿಎನ್‌ಜಿ ವಾಹನಗಳನ್ನು ನಂಬಿಕೊಂಡಿದ್ದ ಆಟೋ ಚಾಲಕರು ಮತ್ತು ಕಾರ್ ಮಾಲೀಕರಿಗೆ ಈ ಇತ್ತೀಚಿನ ದರ ಏರಿಕೆ ಭಾರಿ ಆಘಾತ ನೀಡಿದೆ.

ಮಧ್ಯಪ್ರಾಚ್ಯ ನಡೆಯುತ್ತಿರುವ ನಿರಂತರ ಯುದ್ಧ ಮತ್ತು ಉದ್ವಿಗ್ನತೆಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ ಪೂರೈಕೆಯ ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಹಡಗು ಸಾಗಣೆ ಅಡೆತಡೆಗಳಿಂದಾಗಿ ಅನಿಲ ಆಮದು ಮಾಡಿಕೊಳ್ಳುವ ವೆಚ್ಚ ದುಬಾರಿಯಾಗಿದೆ. ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿದಿರುವುದು ಇಂಧನ ದರಗಳ ಮೇಲೆ ನೇರ ಪರಿಣಾಮ ಬೀರಿದೆ.

Must Read