August 29, 2026
Saturday, August 29, 2026
spot_img

FOOD | ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಸ್ಟೈಲ್ ಕಾಜು ಪನೀರ್ ಮಸಾಲಾ!

ಕಾಜು ಪನೀರ್ ಮಸಾಲಾ ಉತ್ತರ ಭಾರತದ ಅತ್ಯಂತ ಜನಪ್ರಿಯ ಹಾಗೂ ರಿಚ್ ಗ್ರೇವಿ ಖಾದ್ಯಗಳಲ್ಲಿ ಒಂದಾಗಿದೆ. ಮೃದುವಾದ ಪನೀರ್ ತುಂಡುಗಳು, ಕರಿದ ಗೋಡಂಬಿ ಮತ್ತು ಕೆನೆಭರಿತ ಮಸಾಲೆ ಗ್ರೇವಿಯ ಸಂಯೋಜನೆ ಈ ಖಾದ್ಯಕ್ಕೆ ವಿಶೇಷ ರುಚಿ ನೀಡುತ್ತದೆ. ಚಪಾತಿ, ಬಟರ್ ನಾನ್, ಕುಲ್ಚಾ ಅಥವಾ ಜೀರಾ ರೈಸ್ ಜೊತೆಗೆ ಸವಿಯಲು ಇದು ಸೂಪರ್ ಕಾಂಬಿನೇಷನ್ ಆಗಿದೆ.

ಈ ರುಚಿಕರ ಖಾದ್ಯ ತಯಾರಿಸಲು ಮೊದಲು 200 ಗ್ರಾಂ ಪನೀರ್ ಅನ್ನು ಚೌಕಾಕಾರವಾಗಿ ಕತ್ತರಿಸಿ ಇಟ್ಟುಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕಿ ಪನೀರ್ ತುಂಡುಗಳನ್ನು ಲಘುವಾಗಿ ಹುರಿದುಕೊಳ್ಳಿ. ಅದೇ ರೀತಿ 20 ರಿಂದ 25 ಗೋಡಂಬಿಗಳನ್ನು ಕೂಡ ಸ್ವಲ್ಪ ಫ್ರೈ ಮಾಡಿ ಪಕ್ಕಕ್ಕಿಡಿ.

ಅದೇ ಬಾಣಲೆಯಲ್ಲಿ ಜೀರಿಗೆ ಹಾಕಿ, ನಂತರ ಸಣ್ಣಗೆ ಹೆಚ್ಚಿದ ಎರಡು ಈರುಳ್ಳಿಯನ್ನು ಸೇರಿಸಿ ಚೆನ್ನಾಗಿ ಹುರಿಯಿರಿ. ಈರುಳ್ಳಿ ಬಣ್ಣ ಬದಲಾಗುತ್ತಿದ್ದಂತೆ ಒಂದು ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬೇಯಿಸಿ. ನಂತರ ಎರಡು ಟೊಮೆಟೊಗಳ ಪ್ಯೂರಿ ಹಾಕಿ ಎಣ್ಣೆ ಬಿಡುವವರೆಗೆ ಚೆನ್ನಾಗಿ ಕುದಿಸಿಕೊಳ್ಳಿ.

ಇದನ್ನೂ ಓದಿ:

ಈಗ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲಾ ಹಾಗೂ ಉಪ್ಪು ಸೇರಿಸಿ ಕಲಸಿ. ಗ್ರೇವಿ ಇನ್ನಷ್ಟು ರಿಚ್ ಆಗಬೇಕಾದರೆ ಕೆಲವು ಗೋಡಂಬಿಗಳನ್ನು ನೀರಿನಲ್ಲಿ ರುಬ್ಬಿ ಪೇಸ್ಟ್ ಮಾಡಿ ಇದಕ್ಕೆ ಸೇರಿಸಬಹುದು. ಬಳಿಕ ಹುರಿದ ಪನೀರ್ ಮತ್ತು ಗೋಡಂಬಿ ಸೇರಿಸಿ ಸಣ್ಣ ಉರಿಯಲ್ಲಿ ಎರಡು ನಿಮಿಷ ಕುದಿಸಿ.

ಕೊನೆಯಲ್ಲಿ ಸ್ವಲ್ಪ ಕಸೂರಿ ಮೇಥಿ ಮತ್ತು ತಾಜಾ ಕ್ರೀಮ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಸವಿಯಾದ ಕಾಜು ಪನೀರ್ ಮಸಾಲಾ ಸಿದ್ಧವಾಗುತ್ತದೆ. ಬಿಸಿ ಬಿಸಿ ನಾನ್ ಅಥವಾ ಚಪಾತಿ ಜೊತೆಗೆ ಸವಿದರೆ ಅದರ ರುಚಿ ಮತ್ತಷ್ಟು ಹೆಚ್ಚುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !