May 24, 2026
Sunday, May 24, 2026
spot_img

ಬಂಗಾಳದ ಫಾಲ್ಟಾದಲ್ಲಿ ಗೆದ್ದು ಸಂಭ್ರಮಿಸಿದ ಬಿಜೆಪಿ: ಟಿಎಂಸಿಗೆ ತೀವ್ರ ಮುಖಭಂಗ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದ ಮರುಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ ಭರ್ಜರಿ ಗೆಲುವು ದಾಖಲಿಸಿದ್ದು, ಈ ಮೂಲಕ ಟಿಎಂಸಿಯ ಸಾಂಪ್ರದಾಯಿಕ ಭದ್ರಕೋಟೆಗೆ ಲಗ್ಗೆ ಇಟ್ಟಿದೆ.

4ನೇ ಸ್ಥಾನಕ್ಕೆ ಇಳಿದ ಟಿಎಂಸಿ

22 ಸುತ್ತುಗಳ ಸುದೀರ್ಘ ಮತ ಎಣಿಕೆಯ ನಂತರ ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ 1,49,666 ಮತಗಳನ್ನು ಪಡೆದು ಬೀಗಿದರೆ, ಸಿಪಿಐ(ಎಂ) ಅಭ್ಯರ್ಥಿ ಶಂಭು ನಾಥ್ ಕುರ್ಮಿ 40,645 ಮತಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕಾಂಗ್ರೆಸ್‌ನ ಅಬ್ದುರ್ ರಜಾಕ್ ಮೊಲ್ಲಾ (10,084 ಮತಗಳು) ಮೂರನೇ ಸ್ಥಾನ ಪಡೆದಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿದಿದ್ದ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಕೇವಲ 4ನೇ ಸ್ಥಾನದಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದಾರೆ.

208ಕ್ಕೆ ಏರಿದ ಬಿಜೆಪಿ ಸಂಖ್ಯಾಬಲ

ಈಗಾಗಲೇ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 207 ಸೀಟುಗಳನ್ನು ಗೆದ್ದು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡಿದ್ದು, ಇದರ ನಡುವೆ ಇದೀಗ ಫಾಲ್ಟಾ ಕ್ಷೇತ್ರವನ್ನು ಗೆಲುವ ಮೂಲಕ ವಿಧಾನಸಭೆಯಲ್ಲಿ ತನ್ನ ಸಂಖ್ಯಾಬಲವನ್ನು 208ಕ್ಕೆ ಹೆಚ್ಚಿಸಿಕೊಂಡಿದೆ.

ದೀದಿಗೆ ಶಾಕ್ ಕೊಟ್ಟ ಮತದಾರರು

2011ರಿಂದಲೂ ಟಿಎಂಸಿ ಪಕ್ಷದ ಭದ್ರ ಕೋಟೆಯಾಗಿದ್ದ ಫಾಲ್ಟಾ ಕ್ಷೇತ್ರದಲ್ಲಿ ಈ ಬಾರಿ ಮಮತಾ ಎಂದಿಗೂ ಊಹಿಸದ ಸೋಲು ಕಂಡಿದೆ. ಟಿಎಂಸಿಯ ಜಹಾಂಗೀರ್ ಖಾನ್, ಮತದಾನಕ್ಕೆ ಕೆಲವೇ ದಿನಗಳ ಮುನ್ನ ಅವರು ನಾಟಕೀಯವಾಗಿ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಆದರೆ, ಆಯೋಗದ ನಿಯಮಾವಳಿಗಳ ಪ್ರಕಾರ ವಾಪಸ್ ಪಡೆಯುವ ಗಡುವು ಮುಗಿದಿದ್ದರಿಂದ ಇವಿಎಂ ಯಂತ್ರದಲ್ಲಿ ಅವರ ಹೆಸರು ಮತ್ತು ಟಿಎಂಸಿ ಚಿಹ್ನೆ ಹಾಗೇ ಇತ್ತು. ಹೀಗಾಗಿ ಕಣದಲ್ಲೇ ಇಲ್ಲದ ಖಾನ್ ಕೇವಲ 7,783 ಮತಗಳನ್ನು ಪಡೆದು 4ನೇ ಸ್ಥಾನಕ್ಕೆ ಕುಸಿಯುವ ಮೂಲಕ ಮುಖಭಂಗ ಅನುಭವಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !